ಬೇಕಾಗುವ ಸಾಮಾಗ್ರಿಗಳು: ಕಡಲೇಬೇಳೆ - 1 ಕಪ್ನೀರು - 3 ಕಪ್ಸನ್ಫ್ಲವರ್ ಆಯಿಲ್ - 2 ಚಮಚನೀರುಳ್ಳಿ - 1ಟೊಮ್ಯಾಟೋ - 1ಅರಶಿನ ಪುಡಿ - ಅರ್ಧ ಚಮಚಮೆಣಸಿನ ಪುಡಿ - ಅರ್ಧ ಚಮಚತುಪ್ಪ - 3 ಚಮಚಒಣ ಕೆಂಪು ಮೆಣಸು - 3ಇಂಗು - ಸ್ವಲ್ಪಜೀರಿಗೆ - 1 ಚಮಚಬೆಳ್ಳುಳ್ಳಿ ಎಸಳುಗಳು - 8-10ಉಪ್ಪು - ರುಚಿಗೆ ತಕ್ಕಷ್ಟುಪಾಕ ವಿಧಾನ: ಕಡೆಲೆಬೇಳೆ, ಸನ್ಫ್ಲವರ್ ಆಯಿಲ್, ಅರಶಿನ ಪುಡಿ, ಮೆಣಸಿನ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಮತ್ತು ನೀರುಳ್ಳಿ ಎಲ್ಲವಲನ್ನೂ ಕುಕ್ಕರಿನಲ್ಲಿ ಬೇಯಿಸಿ.ಇನ್ನೊಂದು ಸಣ್ಣ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಸಿಡಿಸಿ. ಅದು ಸಿಡಿದ ನಂತರ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.ನಂತರ ಇದಕ್ಕೆ ಇಂಗು ಸೇರಿಸಿ ಕೂಡಲೇ ಇದನ್ನು ಬೇಯಿಸಿದ ಮಿಶ್ರಣಕ್ಕೆ ಹಾಕಿ.ಇದನ್ನು ಬಿಸಿ ಇರುವಾಗಲೇ ಅನ್ನದೊಂದಿಗೆ ತಿನ್ನಿರಿ.
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು