ಸೆ.15ರಂದು ಆರಂಭವಾದ ಒಂಬತ್ತು ದಿನಗಳ ಉತ್ಸವದಲ್ಲಿ ಬುಧವಾರದವರೆಗೆ ಸುಮಾರು ಒಂದು ಲಕ್ಷದಷ್ಟು ಮಂದಿ ಕೇಶ ಮುಂಡನ ಮಾಡಿಸಿದ್ದಾರೆ ಎಂದು ಟಿಟಿಡಿ ಕಲ್ಯಾಣಕಟ್ಟೆಯ ಉಪ ಕಾರ್ಯನಿರ್ವಹಣಾಧಿಕಾರಿ ವೆಂಕಟಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣಕಟ್ಟೆಯಲ್ಲಿ ಯಾತ್ರಾರ್ಥಿಗಳು ಕಾಯುವ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ, ಈಗಿರುವ 735 ಸಿಬ್ಬಂದಿಗಳ ಸಂಖ್ಯೆಗೆ ಹೊಸದಾಗಿ 40 ಮಹಿಳೆಯರೂ ಸೇರಿದಂತೆ 110 ಕ್ಷೌರಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.