ಆನೆ ಮೊಗದ, ಮಹಾಕಾಯದ, ಕೋಟಿ ಸೂರ್ಯನಿಗೆ ಸಮವಾದ ಪ್ರಭೆಯುಳ್ಳ ಸರ್ವ ವಿಘ್ನಗಳ ನಿವಾರಕನೆ, ಸರ್ವಕಾರ್ಯವನ್ನು ಶುಭವಾಗಿಸು ದೇವನೆ ಎಂಬುದು ಈ ಶ್ಲೋಕದ ಭಾವಾರ್ಥ. ಯಾವುದೇ ಕಾರ್ಯ ಆರಂಭಿಸುವುದಿದ್ದರೆ ಮೊದಲ ಪೂಜೆ ಗಣಪತಿಗೆ. ಎಲ್ಲ ವಿಘ್ನಗಳ ನಿವಾರಿಸುವ ದೇವನೆ...
ಗಣಪತಿಗೆ ಪ್ರೀತಿ ಪಾತ್ರವಾದ ಸಂಖ್ಯೆ 21. ಆದುದರಿಂದ 21 ಗರಿಕೆ ಹಾಗೂ ಬಿಲ್ವ ಪತ್ರೆಗಳಿಂದ ಗಣೇಶನನ್ನು ಪೂಜಿಸುವುದು ರೂಢಿಯಲ್ಲಿದೆ. ಬಿಲ್ವ ಪತ್ರೆಗಳಲ್ಲಿ ಬಹುಔಷಧಿ ಗುಣಗಳಿವೆ. ಆರೋಗ್ಯವೇ ಮಹಾಭಾಗ್ಯ ಎನ್ನುವ ಸೂತ್ರವನ್ನು ಅರಿತವರಿಗೆ ಬಿಲ್ವ ಪತ್ರೆಗಳ ಮಹತ್ವದ ಅರಿವು ಇರುತ್ತದೆ.