ಮುಖ್ಯ ಪುಟ  ವಿವಿಧ > ವೆಬ್ ದುನಿಯಾ ವಿಶೇಷ 07 > ಸ್ವಾತಂತ್ರ್ಯೋತ್ಸವ
 
ಶಾಂತಿ-ಕ್ರಾಂತಿ : ಸ್ವಾತಂತ್ರ್ಯಕ್ಕಾಗಿ "ಶಹೀದ್"
ಭಗತ್ ಸಿಂಗ್ (ಸೆಪ್ಟೆಂಬರ್ 17, 1907-ಮಾರ್ಚ್ 23,1931)
ಸೈಮನ್ ಆಯೋಗ ವಿರುದ್ಧ ಪ್ರತಿಭಟನೆಯಲ್ಲಿ ಲಾಲಾಲಜಪತ ರಾಯ್‌ಗೆ ಏಟು
ND
ಅಸೆಂಬ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಭಗತ್, ಬ್ರಿಟಿಶ್ ಅಧಿಕಾರಿ ಜೆ.ಪಿ.ಸಾಂಡರ್ಸ್ ಕೊಲೆಯಲ್ಲಿ ಭಾಗಿಯಾಗಿದ್ದ ವಿಷಯ ಬ್ರಿಟೀಶರಿಗೆ ತಿಳಿದುಬಂದಿತು. ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್‌ರಿಗೆ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯವನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಚಾರ ಸಾಧನವಾಗಿ ಬಳಸಿಕೊಂಡ ಭಗತ್ ಸಿಂಗ್, ಕೊಲೆ ಆಪಾದನೆಯನ್ನು ಒಪ್ಪಿಕೊಂಡರಲ್ಲದೆ, ವಿಚಾರಣೆಯ ಸಂದರ್ಭದಲ್ಲಿ ಬ್ರಿಟೀಶ್ ಆಡಳಿತದ ಬಗ್ಗೆ ಟೀಕೆಗಳ ಸುರಿಮಳೆಗೈದರು. ಈ ಪ್ರಕರಣವನ್ನು ಎಚ್ಎಸ್ಆರ್ಎ ಸದಸ್ಯರ ಗೈರು ಹಾಜರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದು ಭಗತ್ ಸಿಂಗ್‌ರ ಬೆಂಬಲಿಗರಲ್ಲಿ ಆಕ್ರೋಶವನ್ನುಂಟುಮಾಡಿತು.

ಕಾರಾಗೃಹ ಶಿಕ್ಷೆಗೊಳಗಾದ ಮೇಲೂ ಕೈದಿಗಳು ಮತ್ತು ವಿಚಾರಣೆಯಡಿಯಲ್ಲಿರುವವರ ಹಕ್ಕುಗಳ ಪರವಾಗಿ ಭಗತ್ ಹೋರಾಟ ನಡೆಸಿದರು. ಭಾರತೀಯ ರಾಜಕೀಯ ಕೈದಿಗಳಿಗಿಂತ ಬ್ರಿಟೀಶ್ ಕೊಲೆಗಡುಕರು ಹಾಗೂ ಕಳ್ಳರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು.

63 ದಿನಗಳ ಕಾಲ ನಡೆದ ಈ ಉಪವಾಸ ಸತ್ಯಾಗ್ರಹ ಕಡೆಗೆ ಬ್ರಿಟೀಶರು ಭಗತ್ ಸಿಂಗ್ ಬೇಡಿಕೆಗಳಿಗೆ ಮಣಿಯುವುದರೊಂದಿಗೆ ಅಂತ್ಯಗೊಂಡಿತು. ಇದು ಸಾಮಾನ್ಯ ಭಾರತೀಯರಲ್ಲಿ ಭಾರೀ ಜನಪ್ರಿಯತೆ ಕಂಡಿತು. ಈ ಉಪವಾಸ ಸತ್ಯಾಗ್ರಹಕ್ಕೂ ಮುನ್ನ ಭಗತ್ ಸಿಂಗ್ ಜನಪ್ರಿಯತೆ ಕೇವಲ ಪಂಜಾಬ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು.

1931ರ ಮಾರ್ಚ್ 23ರಂದು ಲಾಹೋರ್‌ನಲ್ಲಿ ಭಗತ್ ಸಿಂಗ್‌ರನ್ನು ಅವರ ಒಡನಾಡಿಗಳಾದ ರಾಜ್‌ಗುರು ಹಾಗೂ ಸುಖ್‌ದೇವ್‌ರೊಂದಿಗೆ ಗಲ್ಲಿಗೇರಿಸಲಾಯಿತು. ಭಾರತ ಮಾತೆಯ ಈ ಮೂವರು ವೀರ ಕುವರರನ್ನು ಗಲ್ಲಿಗೇರಿಸುವುದನ್ನು ಪ್ರತಿಭಟಿಸುತ್ತಿದ್ದ ಬೆಂಬಲಿಗರು ಭಗತ್ ಸಿಂಗ್‌ರನ್ನು ಶಹೀದ್ ಎಂದು ಘೋಷಿಸಿದರು.

ಅಂದಿನ ಪೊಲೀಸ್ ಸೂಪರಿಂಟೆಂಡೆಂಟ್ ಪ್ರಕಾರ, ಭಗತ್ ಸಿಂಗ್ ಮತ್ತವರ ಒಡನಾಡಿಗಳನ್ನು ಗಲ್ಲಿಗೇರಿಸಲು ನಿಗದಿಯಾಗಿದ್ದು ಮಾರ್ಚ್ 23, 1931ರ ಬೆಳಗ್ಗೆ 8 ಗಂಟೆ. ಆದರೆ, ಸಾರ್ವಜನಿಕರಿಗೆ ಏನು ನಡೆಯುತ್ತಿದೆ ಎಂಬುವುದು ತಿಳಿದಲ್ಲಿ ಪರಿಸ್ಥಿತಿ ಹದಗೆಡಬಹುದೆಂದು ಭಾವಿಸಿದ ಬ್ರಿಟೀಶ್ ಅಧಿಕಾರಿಗಳು ನಿಗದಿತ ಸಮಯಕ್ಕೂ ಮುಂಚೆಯೇ ಅವರನ್ನು ಗಲ್ಲಿಗೇರಿಸಲು ಆಜ್ಞೆಯಿತ್ತರು.

ಭಗತ್ ಸಿಂಗ್‌ರನ್ನು ಸಟ್ಲೆಜ್ ನದಿಯ ಹುಸೇನ್‌ವಾಲ ತೀರದಲ್ಲಿ ಸಮಾಧಿ ಮಾಡಲಾಯಿತು. ಇಂದು, ಭಗತ್ ಸಿಂಗ್ ಮೆಮೋರಿಯಲ್‌ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುತ್ತದೆ.

ಆರಂಭದಲ್ಲಿ ಗಾಂಧಿ ರಾಷ್ಟ್ರೀಯತೆಯತ್ತ ಒಲವು ಹೊಂದಿದ್ದ ಭಗತ್, ಕ್ರಮೇಣ ಕ್ರಾಂತಿಕಾರಿ ಮಾರ್ಕ್ಸ್‌ವಾದದೆಡೆ ಹೊರಳಲಾರಂಭಿಸಿ ಕಾರ್ಲ್ ಮಾರ್ಕ್ಸ್, ಫ್ರೆಡ್ರಿಕ್ ಎಂಗಲ್ಸ್, ವ್ಲಾದಿಮಿರ್ ಲೆನಿನ್ ಬೋಧನೆಗಳನ್ನು ಓದಲಾರಂಭಿಸಿದರು. ಇದರಿಂದ ಪ್ರೇರಿತರಾಗಿ ಭಾರತ ಕೇವಲ ಸಮಾಜವಾದಿ ನೆಲೆಗಟ್ಟಿನ ಮೇಲೆ ಮಾತ್ರ ಸ್ಥಿರವಾಗಿ ನಿಲ್ಲಲು ಸಾಧ್ಯ ಎಂಬ ನಿಲುವು ತಳೆಯಲಾರಂಭಿಸಿದ ಭಗತ್, ಸಮಾಜವಾದದ ಕಟ್ಟಾ ಪ್ರತಿಪಾದಕರಾದರು. ಇದರಿಂದಾಗಿಯೇ, ಈಗಲೂ ಇಂದಿನ ಸಮಾಜವಾದಿ ನಾಯಕರು ಅವರನ್ನು ಭಾರತೀಯ ಸಮಾಜವಾದದ ಸ್ಥಾಪಕ ಭಗತ್ ಸಿಂಗ್ ಎಂದು ಗೌರವದಿಂದ ಸ್ಮರಿಸುತ್ತಾರೆ.

ಕಡೆಯವರೆಗೂ 'ವ್ಯಕ್ತಿಯನ್ನು ಕೊಲ್ಲಬಹುದು, ಆದರೆ ಆತನ ಚಿಂತನೆಗಳನ್ನು ಕೊಲ್ಲಲಾಗದು' ಎನ್ನುವ ತತ್ವಕ್ಕೆ ಬದ್ಧರಾಗಿದ್ದ ಭಗತ್ ಸಿಂಗ್, ಕಡೆಗೂ ತಮ್ಮ ತತ್ವಾದರ್ಶಗಳಿಗಾಗಿ ಪ್ರಾಣವನ್ನೇ ಪಣವಾಗಿಟ್ಟರು. ಮಹಾನ್ ಸಾಮ್ರಾಜ್ಯಗಳು ನಾಶವಾದವು, ಆದರೆ ಮಾನವನ ಚಿಂತನೆಗಳು ಮಾತ್ರ ಶಾಶ್ವತ ಎನ್ನುವಂತೆ ರಷ್ಯಾ ಕ್ರಾಂತಿಯಿಂದ ಅವರು ಮನಗಂಡಿದ್ದರು.

ಭಗತ್ ಸಿಂಗ್‌ರನ್ನು ಗಲ್ಲಿಗೇರಿಸುವ ಕೆಲ ದಿನಗಳ ಮುನ್ನ ಅಂದರೆ ಮಾರ್ಚ್ 20ರಂದು, ಅವರ ಗೆಳೆಯ ಪ್ರನ್ನತ್ ಸಿಂಗ್ ಸೆರೆಮನೆಯಲ್ಲಿ ಅವರನ್ನು ಭೇಟಿಯಾಗಿ ಕ್ಷಮಾದಾನ ಪತ್ರಕ್ಕೆ ಸಹಿ ಮಾಡುವಂತೆ ಕೇಳಿದರು. ಆದರೆ, ಭಗತ್ ಸಿಂಗ್ ತಮ್ಮ ನಿರ್ಧಾರಗಳಿಗೆ ಎಷ್ಟು ಬದ್ಧರಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರೆಂದರೆ, ಜಗತ್ತಿನ ಯಾವುದೇ ಶಕ್ತಿಯು ಅವರನ್ನು ಅಸಮರ್ಥರನ್ನಾಗಿಸಲು ಸಾಧ್ಯವಿರಲಿಲ್ಲ.

ಶಹೀದ್ ಭಗತ್ ಸಿಂಗ್!
1| 2
ಮತ್ತಷ್ಟು
ಗಾಂಧೀಜಿಗೆ "ಮಹಾತ್ಮ" ಅಭಿದಾನ ದೊರೆತದ್ದು ಹೇಗೆ...