ಮುಖ್ಯ ಪುಟ » ವಿವಿಧ » ವಿಶೇಷ 2010 » ಪ್ರೇಮಿಗಳ ದಿನ-10 » ಕವನ: ಹುಡುಗಿ ಬೇಕಾಗಿದ್ದಾಳೆ! (Valentines Day | Lovers Day | 2010 | Love | I love You)
Bookmark and Share Feedback Print
 
ರವೀಂದ್ರ ಶೆಟ್ಟಿ

ಸಿಂಪಲ್ ಹುಡುಗನಿಗೆ
ಹುಡುಗಿ ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೆಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಇ-ಮೇಲ
ಸಂಬಂಧಿತ ಮಾಹಿತಿ ಹುಡುಕಿ