ಕೇಜ್ರಿವಾಲ್ ನರೇಂದ್ರ ಮೋದಿಗೆ ಬರೆದ ಪತ್ರದ ಸಾರಾಂಶ ಕೆಳಗಿದೆ ಓದಿ
ನವದೆಹಲಿ|
ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಮುಖೇಶ್ ಅಂಬಾನಿಗೆ ಕೆಲವು ಅನಿಲ ಬಾವಿಗಳನ್ನು ಕೇಂದ್ರ ಸರ್ಕಾರ ಗುತ್ತಿಗೆ ನೀಡಿದೆ. ಈ ಒಪ್ಪಂದದಂತೆ ರಿಲಯನ್ಸ್ ಪ್ರತಿ ಯೂನಿಟ್ಗೆ 2.3 ಡಾಲರ್ಗೆ ಅನಿಲ ಪೂರೈಕೆ ಮಾಡಬೇಕಿತ್ತು. ಮುಖೇಶ್ ಕೇಂದ್ರ ಸರ್ಕಾರದಮೇಲೆ ಪ್ರಭಾವ ಬೀರಿ 4 ಡಾಲರ್ಗಿಂತ ಹೆಚ್ಚು ಮಾಡಿಕೊಂಡರು. ಆದರೆ ಏಪ್ರಿಲ್ ಒಂದರಿಂದ ಸರ್ಕಾರ 8 ಡಾಲರ್ ನೀಡಲು ಮುಂದಾಗಿದೆ. ಇದರಿಂದ ಅಂಬಾನಿಗೆ 54,000 ಕೋಟಿ ಲಾಭವಾಗಲಿದೆ. ಒಂದು ವೇಳೆ ಅನಿಲ ಬೆಲೆ ಏರಿಕೆಯಾದರೆ ಇತರ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ದೆಹಲಿಯ ವರ್ಷದ ಬಜೆಟ್ ಕೂಡ ಇಷ್ಟು ಇರುವುದಿಲ್ಲ. ಅನಿಲ ಬೆಲೆ ಏರಿಕೆಯಾದ್ರೆ ಇನ್ನುಳಿದ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿ ಜನಸಾಮಾನ್ಯರಿಗೆ ಹೊರೆಯಾಗಲಿದೆ.