ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಮೋದಿ ವಿರುದ್ಧ ಕೇಸ್ ದಾಖಲು

PTI

"ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ನರೇಂದ್ರ ಮೋದಿ ಮತ್ತು ನಿಶಿಕಾಂತ್ ದುಬೆ ವಿರುದ್ಧ ಜೆಸಿದಿಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜೆಜೆ ಸಾಮಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಮೋದಿ ಮತ್ತು ದುಬೆ ಚಿತ್ರಗಳನ್ನೊಳಗೊಂಡ ಸ್ಟಿಕ್ಕರ್‌ಗಳನ್ನು ತಾಬಾ ಘಾಟ್ ಗ್ರಾಮದಲ್ಲಿನ ಕಂಬವೊಂದಕ್ಕೆ ಅಂಟಿಸಲಾಗಿದೆ".

ದಿಯೋಗರ್ | ವೆಬ್‌ದುನಿಯಾ|
ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಕ್ಷದ ಗೊಡ್ಡಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಶಿಕಾಂತ್ ದುಬೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆದರೆ ಸ್ಟಿಕರ್‌ನಲ್ಲಿ ಪ್ರಿಂಟರ್ ಮತ್ತು ಪ್ರಕಾಶಕರ ಹೆಸರುಗಳನ್ನು ನಮೂದಿಸಲಾಗಿಲ್ಲ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಅದು ಕಡ್ಡಾಯ " ಎಂದು ಸಾಮಂತ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :