ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

PTI

"ಕೋಮುವಾದವನ್ನು ತಡೆಯಲು ಯಾವ ಮಟ್ಟಿನ ಕೆಲಸ ಮಾಡಲು ಕೂಡ ಸಹ ಹಿಂಜರಿಯುವುದಿಲ್ಲ. ಅವಶ್ಯ ಎನಿಸಿದರೆ ಮೋದಿಯನ್ನೆತ್ತಿ ಸಮುದ್ರಕ್ಕೆ ಎಸೆಯುತ್ತೇವೆ "ಎನ್ನುವುದರ ಮೂಲಕ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ.

7 ಬಾರಿ ಬರಾತ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು, ದಿಗಂಬರ್ ಜೈನ್ ಕಾಲೇಜಿನಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 40,000 ಜನ ಹಿಡಿಯಬಹುದಾದ ಸ್ಥಳದಲ್ಲಿ 1 ಲಕ್ಷ ಜನರು ಜಮಾಯಿಸಿದ್ದರು ಎಂದು ವರದಿಯಾಗಿದೆ.

ಅಗಾಧ ಸಂಖ್ಯೆಯಲ್ಲಿ ನೆರೆದಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಅಜಿತ್ ಸಿಂಗ್ ನರೇಂದ್ರ ಮೋದಿ ಪ್ರಚಾರ ತಂತ್ರವನ್ನು ಉಲ್ಲೇಖಿಸಿಸುತ್ತಾ "ನಾವು ಮೋದಿ ಅಲೆಯಿದೆ ಎಂದು ಕೇಳಿದ್ದೇವೆ. ಆದರೆ ಇಲ್ಲಿ, ರಾಷ್ಟ್ರೀಯ ಲೋಕದಳದ ಚಂಡಮಾರುತ ಇದೆ" ಎಂದು ಹೇಳಿದರು.

ಮುಜಾಫರ್‌ನಗರ ಜಿಲ್ಲೆಯಲ್ಲಿನ ಗಲಭೆಗಳ ಕುರಿತು ಮಾತನಾಡುತ್ತಾ, ಜಾಟ್ ನಾಯಕ "ಮುಜಾಫರ್‌ನಗರದಲ್ಲಿ ದಂಗೆಗಳು ಎಸ್ಪಿ ಮತ್ತು ಬಿಜೆಪಿಯ ಜಂಟಿ ಕಾರ್ಯತಂತ್ರ ಪರಿಣಾಮವಾಗಿ ನಡೆಯಲ್ಪಟ್ಟವು. ಈ ಕಾರಣದಿಂದ ಪವರ್ಧಮಾನಕ್ಕೆ ಬರುತ್ತಿದ್ದ ಬೆಲ್ಲದ ಉದ್ಯಮ ನಾಶವಾಯಿತು. ಹಿಂದೂಗಳು ಮತ್ತು ಮುಸ್ಲಿಮರಿಬ್ಬರಿಗೂ ಇದರಿಂದ ನಷ್ಟವಾಯಿತು" ಎಂದು ಆರೋಪಿಸಿದರು.

ಬರಾತ್| ವೆಬ್‌ದುನಿಯಾ|
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ಉರಿಯುತ್ತದೆ ಎಂದು ರಾಷ್ಟ್ರೀಯ ಲೋಕದಳ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.
ಅಗಾಧ ಜನಸಾಗರವನ್ನು ನಿಯಂತ್ರಿಸಲು ಪಕ್ಷದ ಕಾರ್ಯಕರ್ತರು ಹರಸಾಹಸವನ್ನು ಮಾಡಿದರು, ಮಾಧ್ಯಮ ಸ್ಟ್ಯಾಂಡ್ ಮತ್ತು ವಿಐಪಿ ವೇದಿಕೆಯಲ್ಲೂ ಜನರು ಕಿಕ್ಕಿರಿದು ನೆರೆದಿದ್ದರು. ಮಾಧ್ಯಮ ವ್ಯಕ್ತಿ ವೇದಿಕೆಯ ಆಚೆಗೆ ತಳ್ಳಲ್ಪಟ್ಟು ಗಾಯಗಳಾಗಿವೆ ಎಂದು ವರದಿಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :