ಶಾಸಕರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಹಿಳೆ ನಿಗೂಢ ಸಾವು

ವೆಬ್‌ದುನಿಯಾ|
ಬಿಲಾಸ್‌ಪುರ: ಚತ್ತೀಸ್‌ಗಢ ವಿಧಾನಸಭೆಗೆ ಕೇವಲ ಒಂದು ದಿನ ಬಾಕಿಇರುವಂತೆ, ಮತ್ತು ಮಾಜಿ ಆರೋಗ್ಯ ಸಚಿವ ಕೃಷ್ಣಮೂರ್ತಿ ಬಾಂಧಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಮಹಿಳೆಯೊಬ್ಬರು ನಿಗೂಢ ರೀತಿಯಲ್ಲಿ ಸುಟ್ಟಗಾಯಗಳಿಂದ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬಾಂಧಿ ಅವರ ಸಹಚರ, ಮಾಜಿ ನ್ಯಾಯಾಧೀಶ ಭಾರದ್ವಾಜ್ ಮನೆಯಲ್ಲಿ ಈ ಮಹಿಳೆ ಮೃತಪಟ್ಟಿದ್ದಾಳೆ. ಬಾಂಧಿ ಬಿಲಾಸ್‌ಪುರ ಜಿಲ್ಲೆಯ ಮಾಸ್ತುರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಮಹಿಳೆ ನೀಡಿರುವ ದೂರಿನಲ್ಲಿ ಭಾರದ್ವಾಜ್ ನನ್ನ ಮೇಲೆ ಮೊದಲಿಗೆ ಅತ್ಯಾಚಾರವೆಸಗಿದರು ಮತ್ತು ಬಾಂಧಿಗೆ ಪರಿಚಯಿಸಿ ಬಿಜೆಪಿ ನಾಯಕ ನಿನ್ನನ್ನು ಮತ್ತು ಮಕ್ಕಳನ್ನು ನೋಡಿಕೊಳ್ತಾರೆ, ನಿನಗೆ ಕೆಲಸವನ್ನು ಕೂಡ ಒದಗಿಸ್ತಾರೆ, ಚಿಂತೆ ಮಾಡ್ಬೇಡ ಎಂದು ಹೇಳಿದ್ದರು.


ಇದರಲ್ಲಿ ಇನ್ನಷ್ಟು ಓದಿ :