ಸರಕಾರ ನಡೆಸುವುದೆಂದರೆ ಮಕ್ಕಳಾಟವಲ್ಲ: ಸೋನಿಯಾ ಗಾಂಧಿ

PTI

ದೆಹಲಿಯಲ್ಲಿ ನಡೆದ ಚುನಾವಣಾ ಪ್ರಚಾರವೊಂದರಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರೇಜಿವಾಲರ ಹೆಸರನ್ನು ಬಳಸದೆ ಪರೋಕ್ಷವಾಗಿ ಅವರ ಮೇಲೆ ಟೀಕಾಸ್ತ್ರ ಪ್ರಯೋಗಿಸಿದರು." ಕೆಲವರು ಸರಕಾರ ನಡೆಸುವುದೆಂದರೆ ಮಕ್ಕಳಾಟ ಎಂದುಕೊಂಡಿದ್ದಾರೆ. ಆದರೆ ಇದು ತಪ್ಪು ಅಭಿಪ್ರಾಯ. ದೆಹಲಿಯಲ್ಲಿ ಇಂತಹ ಕೆಲವು ಜನ ಮೈದಾನವನ್ನು ಬಿಟ್ಟು ಓಡಿ ಹೋದರು" ಎಂದಿದ್ದಾರೆ.

ನವದೆಹಲಿ | ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
ಮೊದಲ ಬಾರಿ ಆಪ್ ನಾಯಕ ಅರವಿಂದ ಕ್ರೇಜಿವಾಲ್ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರಕಾರ ನಡೆಸುವುದೆಂದರೆ ಮಕ್ಕಳಾಟವಲ್ಲ ಎಂದು ಚೇಡಿಸಿದ್ದಾರೆ.
ಬಿಜೆಪಿ ಮೇಲೂ ವಾಗ್ದಾಳಿ ನಡೆಸಿದ ಅವರು "ಕೇಸರಿ ಪಕ್ಷದವರ ದೃಷ್ಟಿಯಲ್ಲಿ ದೇಶಭಕ್ತಿ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಈ ಚುನಾವಣೆಯಲ್ಲಿ ಎರಡು ಸಿದ್ಧಾಂತಗಳ ನಡುವೆ ಘರ್ಷಣೆಯಾಗಲಿದೆ. ಒಂದು ಸಿದ್ಧಾಂತ (ಬಿಜೆಪಿ) ಸಮಾಜದಲ್ಲಿ ಒಡಕುಂಟು ಮಾಡಲು ಹೊರಟರೆ, ಇನ್ನೊಂದು (ಕಾಂಗ್ರೆಸ್) ಸಮಾಜವನ್ನು ಸೇರಿಸುವ ಧ್ಯೇಯವನ್ನಿಟ್ಟು ಕೊಂಡಿದೆ" ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :