100 ಕೋಟಿ ರೂ.ಗಳಿಗೆ ರಾಜ್ಯಸಭಾ ಸೀಟ್ ಸೇಲ್: ಕಾಂಗ್ರೆಸ್ ಎಂಪಿ

ರಾಜೇಶ್ ಪಾಟೀಲ್|
PTI
PTI
ನವದೆಹಲಿ: ನಿಮ್ಮ ಬಳಿ ನೂರು ಕೋಟಿ ರೂ.ಗಳಿದ್ದರೆ ನೀವು ರಾಜ್ಯಸಭೆ ಸದಸ್ಯರಾಗಬಹುದು. ಕಾಂಗ್ರೆಸ್ ಮುಖಂಡ ಬೀರೇಂದ್ರ ಸಿಂಗ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೀರೇಂದ್ರ ಸಿಂಗ್ ಅವರ ಹೇಳಿಕೆಯಿಂದ ರಾಜ್ಯಸಭೆಯ ಸ್ಥಾನ ಸೇಲ್‌ಗಿದೆಯೇ ಎಂಬ ಅನುಮಾನ ಹುಟ್ಟದಿರದು. 'ರಾಜ್ಯಸಭೆ ಸ್ಥಾನ ಪಡೆಯಲು ಯಾವ ಅರ್ಹತೆಯೂ ಬೇಡ. 100 ಕೋಟಿ ರೂ.ಗಳು ನಿಮ್ಮ ಬಳಿಯಿದ್ದರೆ ಸೀಟು ಖಚಿತ 'ಎಂದು ಬೀರೇಂದ್ರ ಸಿಂಗ್ ಸೋಮವಾರ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :