ಹುಡುಗಿ ಕಿರುಚಿದ್ದಕ್ಕೆ ಐವರು ಕಾಮುಕರು ಹೀಗಾ ಮಾಡೋದು!

ಮಾವ್| pavithra| Last Updated: ಮಂಗಳವಾರ, 27 ಅಕ್ಟೋಬರ್ 2020 (08:31 IST)
ಮಾವ್ : 16 ವರ್ಷದ ಹುಡುಗಿಯ ಮೇಲೆ ಐವರು ಮಾನಭಂಗಕ್ಕೆ ಯತ್ನಿಸಿ ಟೆರೇಸ್ ನಿಂದ ಎಸೆದ ಘಟನೆ ಉತ್ತರ ಪ್ರದೇಶದ ಮಾವ್ ನಲ್ಲಿ ನಡೆದಿದೆ.

ಸಂತ್ರಸ್ತೆ ಹಾಗೂ ಇಬ್ಬರು ಆರೋಪಿಗಳು ಒಂದೇ ಗ್ರಾಮದವರಾಗಿದ್ದು, ಇವರಿಬ್ಬರು ತಮ್ಮ ಸ್ನೇಹಿತರೊಂದಿಗೆ ಸೇರಿ ಹುಡುಗಿಯನ್ನು ಅಪಹರಿಸಿ ಮನೆಯ ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಆಗ ಹುಡುಗಿ ಕಿರುಚಿದ ಕಾರಣ ಜನರು ಮನೆಯ ಬಳಿ ಸೇರಲು ಶುರುಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿಗಳು ಹುಡುಗಿಯನ್ನು ಟೆರೇಸ್ ಮೇಲಿಂದ ಎಸೆದಿದ್ದಾರೆ.

ಇದರಿಂದ ಹುಡುಗಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹುಡುಗಿಯ ಕುಟುಂಬದವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :