ದೆಹಲಿ ಚುನಾವಣೆಯ ಎಲ್ಲಾ ಸಮೀಕ್ಷೆಗಳೂ ಸುಳ್ಳಾಗಲಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ- ಬಿಜೆಪಿ ಸಂಸದ

ನವದೆಹಲಿ| pavithra| Last Modified ಭಾನುವಾರ, 9 ಫೆಬ್ರವರಿ 2020 (08:20 IST)
ನವದೆಹಲಿ : ದೆಹಲಿ ಚುನಾವಣೆ ಮುಗಿದಿದ್ದು, ಬಳಿಕ ಬಂದ ಮತಗಟ್ಟೆ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಮತ್ತೆ ಕ್ರೇಜಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ ಎನ್ನಲಾಗಿದೆ.


ಆದರೆ ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ದೆಹಲಿ ಚುನಾವಣೆ ಮಟ್ಟಿಗೆ ಎಲ್ಲಾ ಸಮೀಕ್ಷೆಗಳೂ ಸುಳ್ಳಾಗಲಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ, ದೆಹಲಿ ಚುನಾವಣೆ ಮಟ್ಟಿಗೆ ಎಲ್ಲಾ ಸಮೀಕ್ಷೆಗಳೂ ಸುಳ್ಳಾಗಲಿವೆ. ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಗದ್ದುಗೆ ಏರಲಿದೆ. ಈ ವೇಳೆ ಯಾರೂ ಇವಿಎಂ ಯಂತ್ರವನ್ನು ದೂರಬೇಡಿ ಎಂದು ತಿಳಿಸಿದ್ದಾರೆ. 


ಇದರಲ್ಲಿ ಇನ್ನಷ್ಟು ಓದಿ :