Widgets Magazine

ಪ್ರಾಣಿ ಹೆಸರಲ್ಲಿ ಗೃಹಸಚಿವ ಅಮಿತ್ ಶಾಗೆ ಯದ್ವಾ ತದ್ವಾ ಬೈದ ಬಾಲಿವುಡ್ ನಿರ್ದೇಶಕ

ನವದೆಹಲಿ| Krishnaveni K| Last Modified ಮಂಗಳವಾರ, 28 ಜನವರಿ 2020 (09:08 IST)
ನವದೆಹಲಿ: ಸಿಎಎ ಜಾರಿಗೊಳಿಸಿದ ಬಳಿಕ ದೆಹಲಿಯ ಜೆಎನ್ ಯುನಲ್ಲಿ ನಡೆದ ಹಿಂಸಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಗೃಹ ಸಚಿವ ಅಮಿತ್ ಶಾಗೆ ಯದ್ವಾ ತದ್ವಾ ಬೈದಾಡಿದ್ದಾರೆ.

 
ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿರುವ ಅನುರಾಗ್ ಕಶ್ಯಪ್ ಟ್ವಿಟರ್ ಮೂಲಕ ಅಮಿತ್ ಶಾರನ್ನು ಪ್ರಾಣಿ ಎಂದು ಬೈಗುಳದ ಸುರಿಮಳೆ ಸುರಿಸಿದ್ದಾರೆ.
 
‘ನಮ್ಮ ಗೃಹಸಚಿವರು ಹೇಡಿ. ಅವರು ಪೊಲೀಸರನ್ನೂ ಗೂಂಡಾಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ. ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದೌರ್ಜನ್ಯವೆಸಗುತ್ತಾರೆ. ಅಮಿತ್ ಶಾ ನಡೆ ತೀರಾ ಕೀಳುಮಟ್ಟದ್ದಾಗಿದೆ. ಅವನಂಥಾ ಪ್ರಾಣಿಗೆ ಕಾಲವೇ ಬುದ್ಧಿ ಕಲಿಸಲಿದೆ’ ಎಂದು ಅನುರಾಗ್ ಕಶ್ಯಪ್ ವಾಗ್ದಾಳಿ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :