ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ಅಮೆರಿಕಾದ ಅತ್ಯಾಧುನಿಕ ಹೆಲಿಕ್ಯಾಪ್ಟರ್ ಅಪಾಚಿ

ನವದೆಹಲಿ| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (12:11 IST)
ನವದೆಹಲಿ : ಭಾರತೀಯ ವಾಯುಸೇನೆಗೆ ಇಂದು ಅಮೆರಿಕಾದ ಅತ್ಯಾಧುನಿಕ ಹೆಲಿಕ್ಯಾಪ್ಟರ್ ಅಪಾಚಿ ಸೇರ್ಪಡೆಯಾಗುವುದರ ಮೂಲಕ ಭಾರತೀಯ ಸೇನೆಗೆ ಬಾಹುಬಲ ಬಂದಂತಾಗಿದೆ.
ಅಮೆರಿಕದ ಪ್ರತಿಷ್ಠಿತ ವಿಮಾನ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡಿರುವ ಬಹುಮುಖಿ ಯುದ್ಧ ಕೌಶಲ್ಯ  ಹೊಂದಿರುವ ಅಪಾಚಿ ಹೆಲಿಕಾಪ್ಟರ್ ಗಳು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಹಸ್ತಾಂತರ ಮಾಡಲಾಗುವುದು. ಈ ಮೂಲಕ ಅಮೇರಿಕಾ ನಿರ್ಮಾಣದ ಒಟ್ಟು 22 ಅಪಾಚೆ ಹೆಲಿಕ್ಯಾಪ್ಟರ್ ಗಳು ಭಾರತೀಯ ವಾಯುಪಡೆಗೆ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ.


ಈ ಅಪಾಚಿ ಚಾಪರ್ 30 ಎಂಎಂ ಮಷಿನ್ ಗನ್ ಏಕಕಾಲಕ್ಕೆ 1200 ಬಾರಿ ಫೈರಿಂಗ್ ಮಾಡಲಿದೆ. ಶತ್ರುಗಳ ನೆಲೆಯನ್ನು ಗುರಿಯಿಟ್ಟು ದಾಳಿ ನಡೆಸಬಲ್ಲ ಹೊಂದಿದೆ. ಒಂದು ಗಂಟೆಗೆ 150 ನಾಟಿಕಲ್ ಮೈಲು ಪ್ರಯಾಣಿಸುವ ಶಕ್ತಿ ಹೊಂದಿದೆ. ಭಾರಿ ಮಳೆಯಲ್ಲೂ ಯಾವುದೇ ಅಡೆತಡೆಯಿಲ್ಲದೇ ನಿರ್ವಹಿಸುವ ದಕ್ಷತೆ ಇದೆ. ಯುದ್ಧ ಪ್ರದೇಶದ ಸ್ಪಷ್ಟ ಚಿತ್ರಣವನ್ನು ರವಾನಿಸುವ ಸಾಮರ್ಥ್ಯ ಹೊಂದಿದೆ.ಇದರಲ್ಲಿ ಇನ್ನಷ್ಟು ಓದಿ :