ಕುಡುಕರಿಂದ ತಂಗಿಯನ್ನ ಕಾಪಾಡಲು ಹೋಗಿ ಜೀವ ಕಳೆದುಕೊಂಡ ಅಣ್ಣ

ನೊಯ್ಡಾ| pavithra| Last Modified ಸೋಮವಾರ, 11 ಜನವರಿ 2021 (18:33 IST)
ನೊಯ್ಡಾ : ಇಬ್ಬರು ಕುಡುಕರ ದಾಳಿಯಿಂದ 20 ವರ್ಷದ ಸಹೋದರಿಯನ್ನು ರಕ್ಷಿಸಲು ಹೋಗಿ 22 ವರ್ಷದ ಯುವಕನೊಬ್ಬ ಕೊಲೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಂಠ ಪೂರ್ತಿ ಕುಡಿದ ಕುಡುಕರಿಬ್ಬರು ದಾರಿಯಲ್ಲಿ ನಡೆದುಹೋಗುತ್ತಿದ್ದ ತಂಗಿಯ ಮೇಲೆ ಎಡವಿ ಬೀಳಲು ಹೋಗಿದ್ದಾರೆ. ಆಗ ತಂಗಿ ಕುಡುಕರಿಗೆ ಕಪಾಲಮೋಕ್ಷ ಮಾಡಿದ್ದಾಳೆ.  ಇದರಿಂದ ಕೋಪಗೊಂಡ ಕುಡುಕರು ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದಾಗ ಅಣ್ಣ ಮಧ್ಯ ಪ್ರವೇಶಿಸಿ ತಂಗಿಯನ್ನು ರಕ್ಷಿಸಿ ತನ್ನ ಜೀವ ಕಳೆದುಕೊಂಡಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :