ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡುತ್ತಿದ್ದ ಸಾವಿರಾರು ಪಾಕ್ ಮೂಲದ ಟ್ವಿಟರ್ ಖಾತೆಗಳು

ನವದೆಹಲಿ| Krishnaveni K| Last Modified ಸೋಮವಾರ, 8 ಫೆಬ್ರವರಿ 2021 (11:06 IST)
ನವದೆಹಲಿ: ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಶಾಂತಿ ಕದಡಲು ಯತ್ನಿಸುತ್ತಿರುವ ಪಾಕಿಸ್ತಾನ ಮೂಲದ ಟ್ವಿಟರ್ ಖಾತೆಗಳನ್ನು ಕಿತ್ತು ಹಾಕಲು ಟ್ವಿಟರ್ ಸಂಸ್ಥೆಗೆ ಕೇಂದ್ರ ಸರ್ಕಾರ ಪಟ್ಟಿ ನೀಡಿದೆ.  
> ರೈತ ಪ್ರತಿಭಟನೆ ವಿಚಾರದಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡುತ್ತಿದ್ದ 1178 ಪಾಕ್ ಮೂಲದ ಟ್ವಿಟರ್ ಖಾತೆಗಳ ವಿವರವನ್ನು ಕೇಂದ್ರ ನೀಡಿದೆ. ಅಲ್ಲದೆ, ಈ ಖಾತೆಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದೆ. ಈಗಾಗಲೇ ಕೇಂದ್ರದ ಸೂಚನೆ ಮೇರೆಗೆ ಟ್ವಿಟರ್ ಪ್ರಚೋದನಕಾರಿ ಟ್ವೀಟ್ ಗಳನ್ನು ಡಿಲೀಟ್ ಮಾಡುವ ಕೆಲಸ ಮಾಡುತ್ತಿದೆ.>


ಇದರಲ್ಲಿ ಇನ್ನಷ್ಟು ಓದಿ :