ಚಮೋಲಿ ಹಿಮಸ್ಪೋಟ: 26 ಮೃತದೇಹ ಪತ್ತೆ; 176 ಮಂದಿ ಇನ್ನೂ ನಾಪತ್ತೆ

ಚಮೋಲಿ| Krishnaveni K| Last Modified ಮಂಗಳವಾರ, 9 ಫೆಬ್ರವರಿ 2021 (10:16 IST)
ಚಮೋಲಿ: ಭಾನುವಾರ ಸಂಭವಿಸಿದ ಭೀಕರ ಹಿಮಸ್ಪೋಟದಲ್ಲಿ ಕಣ್ಮರೆಯಾಗಿದ್ದ 26 ಮಂದಿಯ ಮೃತದೇಹವನ್ನು ರಕ್ಷಣಾ ತಂಡಗಳು ಹೊರತೆಗೆದಿವೆ. ಇನ್ನೂ 176 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.

 
ತಪೋವನ್ ಸುರಂಗದಲ್ಲಿ ಸಾಕಷ್ಟು ಜನ ಸಿಲುಕಿಕೊಂಡಿರುವ ಶಂಕೆಯಿದ್ದು, ಇಲ್ಲಿ ಜೆಸಿಬಿಗಳನ್ನು ಬಳಸಿ ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ‍್ಯತೆಯಿದೆ. ಇನ್ನು, ಉತ್ತರಾಂಖಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹಿಮಸ್ಪೋಟಕ್ಕೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :