ಕೊರೋನಾದಲ್ಲಿ ದೇಶದ ಅರ್ಧದಷ್ಟು ಕೊಡುಗೆ ಕೇರಳ, ಮಹಾರಾಷ್ಟ್ರದ್ದೇ!

ನವದೆಹಲಿ| Krishnaveni K| Last Modified ಶನಿವಾರ, 10 ಜುಲೈ 2021 (10:52 IST)
ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಇನ್ನೂ ಕೆಲವು ರಾಜ್ಯಗಳಲ್ಲಿ ಕಡಿಮೆಯಾಗಿಲ್ಲ. ಇದೀಗ ಸಚಿವಾಲಯ ಹೊಸ ಮಾಹಿತಿ ನೀಡಿದೆ.
 > ದೇಶದ ಕೊರೋನಾ ಪ್ರಕರಣಗಳಲ್ಲಿ ಅರ್ಧದಷ್ಟು ಕೊಡುಗೆ ಕೇರಳ ಮತ್ತು ಮಹಾರಾಷ್ಟ್ರದ್ದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.>   ಕೇರಳದ ಎಲ್ಲಾ 14 ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ 15 ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಕೊರೋನಾ ಪ್ರಕರಣಗಳ ಇಳಿಕೆ ಪ್ರಮಾಣವೂ ಕಡಿಮೆ. ಹೀಗಾಗಿ ಈ ಎರಡು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.ಇದರಲ್ಲಿ ಇನ್ನಷ್ಟು ಓದಿ :