ದೇಶದಲ್ಲಿ ಒಂದೇ ದಿನ 46,164 ಮಂದಿಗೆ ಕೊರೊನಾ ಸೋಂಕು

ನವದೆಹಲಿ| Ramya kosira| Last Modified ಗುರುವಾರ, 26 ಆಗಸ್ಟ್ 2021 (10:34 IST)
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ಹರಡುವಿಕೆಯಲ್ಲಿ ಮತ್ತೆ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 46,164 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಒಂದೇ ದಿನ 607 ಸೋಂಕಿತರು ಸಾವನ್ನಪ್ಪಿದ್ದು, 34,159 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.> ಭಾರತದಲ್ಲಿ ಈವೆರೆಗೆ ಒಟ್ಟು 3,25,58,530 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 4,36,365 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 3,33,725 ಸಕ್ರಿಯ ಪ್ರಕರಣಗಳಿದ್ದು, 3,17,88,440 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.>  


ಇದರಲ್ಲಿ ಇನ್ನಷ್ಟು ಓದಿ :