ತಾಯಿ ಬೈದಳೆಂದು ಇಂತಹ ಘೋರ ಕೃತ್ಯ ಎಸಗಿಕೊಂಡ ವಿದ್ಯಾರ್ಥಿನಿ

ಬರೇಲಿ| pavithra| Last Modified ಮಂಗಳವಾರ, 12 ಜನವರಿ 2021 (10:25 IST)
ಬರೇಲಿ :12 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರವಾನಗಿ ಪಡೆಯದ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.

ಶಾಲೆಯ ಹೋಮ್ ವರ್ಕ್ ಮಾಡದ ಹಿನ್ನಲೆಯಲ್ಲಿ ತಾಯಿ ಆಕೆಗೆ ಬೈದಿದ್ದಾಳೆ. ಇದರಿಂದ ಮನನೊಂದ ವಿದ್ಯಾರ್ಥಿನಿ ರಿವಾಲ್ವರ್ ನಿಂದ ಹೊಟ್ಟೆಗೆ ಗುಂಡು ಹಾರಿಸಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದ ಸಾವನಪ್ಪಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :