ಪ್ರತಿಭಟನೆಯ ನಡುವೆಯೂ ಯುವತಿಯೊಬ್ಬಳು ಮಾಡಿದ್ದೇನು ಗೊತ್ತಾ?

ನವದೆಹಲಿ| pavithra| Last Modified ಶನಿವಾರ, 21 ಡಿಸೆಂಬರ್ 2019 (08:18 IST)
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇವೆಲ್ಲಾದರ ನಡುವೆ ಯುವತಿಯೊಬ್ಬಳು ಮಾಡಿದ ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.ಹೌದು. ಪ್ರತಿಭಟನಾ ನಿರತ ಯುವತಿಯೊಬ್ಬಳು ಡ್ಯೂಟಿಯಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರಿಗೆ ಗುಲಾಬಿ ಹೂ ನೀಡಿದ್ದಾಳೆ. ಆದರೆ ಡ್ಯೂಟಿಯಲ್ಲಿದ್ದ ಕಾರಣ ಅವರು ಆ ಹೂವನ್ನು ಸ್ವೀಕರಿಸದೆ ಮುಗುಳುನಗೆ ಬೀರಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :