ಕೊರೋನಾ ನಿಯಮ ಮುರಿದಿದ್ದಕ್ಕೆ ಮಾಲಿಕನ ಜೊತೆ ನಾಯಿಯೂ ಅರೆಸ್ಟ್

ಇಂಧೋರ್| Krishnaveni K| Last Modified ಗುರುವಾರ, 6 ಮೇ 2021 (09:40 IST)
ಇಂಧೋರ್: ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ನಿಯಮಾವಳಿಗಳನ್ನೂ ಬಿಗಿಗೊಳಿಸಲಾಗುತ್ತಿದೆ. ಈ ನಡುವೆ ಇಂಧೋರ್ ನಲ್ಲಿ ನಿಯಮ ಮುರಿದ ತಪ್ಪಿಗೆ ಮಾಲಿಕನ ಜೊತೆ ನಾಯಿಯೂ ಅರೆಸ್ಟ್ ಆಗಿದೆ.
 > ಕರ್ಫ್ಯೂ ಸಂದರ್ಭದಲ್ಲಿ ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಬರುವಂತಿಲ್ಲ. ಆದರೆ ಮಾಲಿಕ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದರು.>   ಅದೇ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಇವರಿಬ್ಬರೂ ಸಿಕ್ಕಿಬಿದ್ದಿದ್ದರು. ಹೀಗಾಗಿ ತಕ್ಷಣವೇ ಮಾಲಿಕನ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುವಾಗ ನಾಯಿಯನ್ನೂ ಜೊತೆಗೇ ಕರೆದೊಯ್ದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :