ನಡುಬೀದಿಯಲ್ಲಿ ಮಹಿಳೆಯರನ್ನ ಸುತ್ತುವರಿದು ಕಾಡಿದ ಕಾಮುಕರು: ವಿಡಿಯೋ ಮಾಡಿ ಆನ್`ಲೈನ್`ಗೆ ಹಾಕಿದರು

ಲಖನೌ| venu| Last Updated: ಭಾನುವಾರ, 28 ಮೇ 2017 (17:36 IST)
14 ಜನರ ಕಾಮುಕರ ಗುಂಪು ನಡುರಸ್ತೆಯಲ್ಲಿ ಇಬ್ಬರು ಸುತ್ತುವರೆದು ಮೈ ಕೈ ಮುಟ್ಟಿ, ಬಟ್ಟೆ ಎಳೆದು ಕಿರುಕುಳ ನೀಡಿರುವ ಘಟನೆ ಉತ್ತರಪ್ರದೇಶದ ಲಖನೌದಿಂದ 318 ಕಿ.ಮೀ ದೂರದ ರಾಮ್ ಪುರ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲ, ತಮ್ಮ ಕುಕೃತ್ಯವನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಹಾಕಿ ವಿಕೃತ ಆನಂದ ಅನುಭವಿಸಿದ್ದಾರೆ.
 

ವಿಡಿಯೋ ಚಿತ್ರೀಕರಣವಾಗಿರುವುದು ಯಾವ ದಿನದಂದು ಎಂದು ಸ್ಪಷ್ಟವಾಗಿಲ್ಲವಾದರೂ ಕಳೆದ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.  ಘಟನೆಯ ಪ್ರಮುಖ ಆರೋಪಿಯನ್ನ ಬಂಧಿಸಿರುವ ಪೊಲೀಸರು ಇತರರಿಗಾಗಿ ಹುಡುಕಾಟ ನಡೆಸಿದ್ದಾರೆ.
 
ಕಿರುಕುಳಕ್ಕೊಳಗಾದ ಮಹಿಳೆಯರ ಗುರುತು ಪತ್ತೆಯಾಗಿಲ್ಲವಾದರೂ ಮಹಿಳೆಯರನ್ನ ಅಡ್ಡ ಗಟ್ಟಿ, ಸುತ್ತುವರೆದು ಕಿರುಕುಳ ಕೊಟ್ಟಿರುವುದು ಸ್ಪಷ್ಟವಾಗಿದೆ. ನೂಕಿ ಎಳೆದಾಡಿ ದುಪ್ಪಟ ಕಿತ್ತು ಮೈ ಕೈ ಮುಟ್ಟಿ ಕಿರುಕುಳ ನೀಡಲಾಗಿದೆ. ಕಿರುಕುಳಕ್ಕೊಳಗಾದ ಮಹಿಳೆಯರು ಕಿರುಚುತ್ತಿರುವ ಧ್ವನಿ ಸಹ ಕೇಳುತ್ತಿದೆ.
 
ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸರ್ಕಾ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಹಿಂದೆ ನೀಡಿದ್ದ ಭರವಸೆಯಂತೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಆಂಟಿ ರೋಮಿಯೋ ಪಡೆ ರಚಿಸಿದೆ. ಆದರೂ, ಮಹಿಳೆಯರ ಮೇಲೆ ಕಿರುಕುಳ ನಿಂತಿಲ್ಲ.ಇದರಲ್ಲಿ ಇನ್ನಷ್ಟು ಓದಿ :