ಬಲವಂತವಾಗಿ ಪತ್ನಿಗೆ ಆಸಿಡ್ ಕುಡಿಸಿದ ಗಂಡ, ಅತ್ತಿಗೆ

ಮಧ್ಯಪ್ರದೇಶ| Krishnaveni K| Last Modified ಬುಧವಾರ, 21 ಜುಲೈ 2021 (09:50 IST)
ಮಧ್ಯಪ್ರದೇಶ: ಸಹೋದರಿ ಜೊತೆ ಸೇರಿಕೊಂಡು ಗಂಡ ಎನಿಸಿಕೊಂಡ ಮಹಾಶಯ ಪತ್ನಿಗೆ ಆಸಿಡ್ ಕುಡಿಸಿದ ಪರಿಣಾಮ ಆಕೆ ಗಂಭೀರವಾಗಿರುವ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ.
 

ಈ ಘಟನೆ ದೆಹಲಿ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
 
ಗ್ವಾಲಿಯರ್ ನ ಮಹಿಳೆ ಮೇಲೆ ಗಂಡ ಮತ್ತು ಆತನ ಸಹೋದರಿ ಜುಲೈ 28 ರಂದು ಇಂತಹ ಪೈಶಾಚಿಕ ಕೃತ್ಯ ನಡೆಸಿದ್ದರು. ಸದ್ಯಕ್ಕೆ ಆಕೆಯ ಸ್ಥಿತಿ ಗಂಭೀರವಾಗಿದ್ದು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ತಾಯಿ ಪ್ರಕರಣದ ಕುರಿತು ವರದಕ್ಷಿಣೆ  ಕಿರುಕುಳ ಆರೋಪದಡಿಯಲ್ಲಿ ದೂರು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :