ಅದು ಬೇಕೇ ಬೇಕೆಂದು ಪತ್ನಿಯನ್ನು ಕೂಡಿಹಾಕಿದ ಪತಿ

ಪಾಟ್ನಾ| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (21:35 IST)
ಪ್ರೀತಿಸಿ ಮದುವೆಯಾದ ಪತಿಯೊಬ್ಬ ತನ್ನ ಪತ್ನಿಗೆ ಮಾಡಬಾರದ್ದನ್ನು ಮಾಡಲು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ.


ಮಗು ಹಾಗೂ ಪತ್ನಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ತನಗೆ ಡಿವೋರ್ಸ್ ಬೇಕೇ ಬೇಕೆಂದು ಹಠ ಹಿಡಿದಿದ್ದನಂತೆ.

ಬಿಹಾರದಲ್ಲಿ ಈ ಘಟನೆ ನಡೆದಿದ್ದು, ಗೃಹಿಣಿಯ ತವರು ಮನೆಯವರು ಮಹಿಳೆಯನ್ನು ಕರೆದುಕೊಂಡು ಬರಲು ಗಂಡನ ಮನೆಗೆ ತೆರಳಿದಾಗ ಗಂಡನ ಕೃತ್ಯ ಬಯಲಿಗೆ ಬಂದಿದೆ.

ಪತಿ ವಿನಾಯಕ್ ಸಿಂಗ್ ಎಂಬಾತ ತನ್ನ ಪತ್ನಿ ಸೋನಿಯಾ ದತ್ತಾ ಎಂಬುವರನ್ನು ಎರಡ್ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು.

ಮಗು ಹುಟ್ಟಿದ ಬಳಿಕ ತವರಿಗೆ ಕಳಿಸದೇ ಡಿವೋರ್ಸ್ ಬೇಕೆಂದು ಕಿರುಕುಳ ನೀಡುತ್ತಿದ್ದನಂತೆ ಸೋನಿಯಾ ಕುಟುಂಬದವರು ಆರೋಪಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :