ಆರು ವರ್ಷದ ಮಗುವಿನ ಮೇಲೆ ಕೇರಳ ಸಿಪಿಎಂ ಕಾರ್ಯಕರ್ತನಿಂದ ಮಾನಭಂಗ

ತಿರುವನಂತಪುರಂ| Krishnaveni K| Last Modified ಮಂಗಳವಾರ, 13 ಜುಲೈ 2021 (09:30 IST)
ತಿರುವನಂತಪುರಂ: ಆರು ವರ್ಷದ ಬಾಲಕಿ ಮೇಲೆ ಕೇರಳ ಸಿಪಿಎಂನ ಕಾರ್ಯಕರ್ತನೊಬ್ಬ ಮಾನಭಂಗ ಮಾಡಿರುವ ಘಟನೆ ದೇವರ ನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ.
 

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತಹ ಹೇಯ ಕೃತ್ಯ ನಡೆದಿದೆ. 21 ವರ್ಷದ ಸಿಪಿಐಎಂ ಕಾರ್ಯಕರ್ತ ಆರೋಪಿಯನ್ನು ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
 
ಈ ವಿಚಾರ ಈಗ ರಾಜಕೀಯ ತಿರುವು ಪಡೆದಿದ್ದು, ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಸೇರಿದಂತೆ ವಿರೋಧ ಪಕ್ಷದ ನಾಯಕರು, ಬೆಂಬಲಿಗರು ಸಿಪಿಐಎಂ ಸಂಸ್ಕೃತಿ ಇದು. ಇಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ರಕ್ಷಣೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :