ರಾಜಧಾನಿ ನವದೆಹಲಿಯಲ್ಲಿ ಲಘು ಭೂಕಂಪ

ನವದೆಹಲಿ| pavithra| Last Modified ಗುರುವಾರ, 7 ಡಿಸೆಂಬರ್ 2017 (07:06 IST)
ನವದೆಹಲಿ: ದಕ್ಷಿಣಭಾರತದಲ್ಲಿ ಓಖಿ ಚಂಡಮಾರುತಕ್ಕೆ ಸಿಲುಕಿ ಅನೇಕ ಸಾವು ನೋವುಗಳಾಗಿರುವುದನ್ನು ನಾವು ನೋಡಿದ್ದೇವೆ. ಚಂಡಮಾರುತದ ಪ್ರಭಾವದಿಂದ ಉಂಟಾದ ನಷ್ಟಗಳಿಂದ ಜನರು ಇನ್ನು ಚೇತರಿಸಿಕೊಂಡಿಲ್ಲ, ಅಷ್ಟರಲ್ಲೇ ಉತ್ತರ ಭಾರತದಲ್ಲಿ ಇನ್ನೊಂದು ಅಪಾಯದ ಮುನ್ಸೂಚನೆ ಕಾಣುತ್ತಿದೆ. ಅದೇನೆಂದರೆ ರಾಜಧಾನಿ ನವದೆಹಲಿಯಲ್ಲಿ ಲಘು ಭೂಕಂಪನ ಉಂಟಾಗಿದೆಯಂತೆ.


ಬುಧವಾರ ರಾತ್ರಿ ನವದೆಹಲಿ, ನೋಯ್ಡಾ ಕೆಲವು ಭಾಗಗಳಲ್ಲಿ ಲಘು ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪನದಲ್ಲಿ ಅದರ ತೀವ್ರತೆ 5.5ರಷ್ಟಿತ್ತು ಎಂದು ಭಾರತೀಯ ಭೂ ವಿಜ್ಞಾನ ಇಲಾಖೆಯಿಂದ ತಿಳಿದು ಬಂದಿದೆ. ಇನ್ನೂ ಹರಿಯಾಣ,ಉತ್ತರಪ್ರದೇಶ, ಹಿಮಾಚಲಪ್ರದೇಶದಲ್ಲೂ ಕೂಡ ಭೂಕಂಪನ ಅನುಭವವಾಗಿದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :