ಶವಾಗಾರದಲ್ಲಿ ಬದುಕಿದವ ಮತ್ತೆ ಸತ್ತ ಕತೆ!

ಲಕ್ನೋ| Krishnaveni K| Last Modified ಗುರುವಾರ, 25 ನವೆಂಬರ್ 2021 (08:44 IST)
ಲಕ್ನೋ: ಮೃತಪಟ್ಟ ನಂತರ ಶವಾಗಾರದಲ್ಲಿ ದೇಹವಿಡುವುದು ಸಾಮಾನ್ಯ. ಇದೇ ರೀತಿ ವ್ಯಕ್ತಿಯೊಬ್ಬನನ್ನು ಮೃತಪಟ್ಟನೆಂದು ತಿಳಿದು ಶವಾಗಾರದಲ್ಲಿರಿಸಿದಾಗ ಆತ ಬದುಕಿ ಬಂದು ಪವಾಡ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಆದರೆ ಆತ ಇದೀಗ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಶ್ರೀಕೇಶ್ ಕುಮಾರ್ ಎಂಬಾತ ನವಂಬರ್ 18 ರಂದು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟನೆಂದು ಘೋಷಿಸಲಾಯಿತು. ಅದರಂತೆ ಆತನ ದೇಹವನ್ನು ಸಂಬಂಧಿಕರಿಗೊಪ್ಪಿಸುವ ಮೊದಲು ಏಳು ಗಂಟೆಗಳ ಕಾಲ ಶವಾಗಾರದಲ್ಲಿ ಫ್ರೀಜರ್ ನಲ್ಲಿಡಲಾಗಿತ್ತು.


ಪವಾಡವೆಂಬಂತೆ ಆತ ಜೀವಂತವಾಗಿದ್ದ. ತಕ್ಷಣವೇ ಆತನನ್ನು ಹೊರಗೆ ತಂದ ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದರು. ಆದರೆ ಚಿಕಿತ್ಸೆ ವೇಳೆ ಆತ ನಿಜವಾಗಿಯೂ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :