ಮದ್ಯದ ಅಮಲಿನಲ್ಲಿ 75 ವರ್ಷದ ವೃದ್ಧೆಯ ಮೇಲೆ ಮಾನಭಂಗ ಎಸಗಿದ ಯುವಕ

ವಿಜಯವಾಡ| pavithra| Last Modified ಸೋಮವಾರ, 11 ಜನವರಿ 2021 (18:30 IST)
:  75 ವರ್ಷದ ವೃದ್ಧೆಯ ಮೇಲೆ 30 ವರ್ಷದ ಯುವಕನೊಬ್ಬ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ಹೊರವಲಯದ ಜಾನುವಾರ ಶೆಡ್ ನಲ್ಲಿ ವೃದ್ಧೆ ಮಲಗಿದ್ದಾಗ ಮದ್ಯದ ಅಮಲಿನಲ್ಲಿದ್ದ ಆರೋಪಿ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಆಕೆ ಕೂಗಿಕೊಳ್ಳಲು ಯತ್ನಿಸಿದ್ದಕ್ಕೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಆಭರಣಗಳನ್ನು ದೋಚಿದ್ದಾನೆ. ವೃದ್ಧೆಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡಗಳನ್ನು ರಚಿಸಿ ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :