ಬೆಟ್ಟಿಂಗ್ ನಲ್ಲಿ ಕಳೆದುಕೊಂಡ ಹಣ ಪಡೆಯಲು ಚಿನ್ನ ಕದ್ದು ಸಿಕ್ಕಿಬಿದ್ದ

ನವದೆಹಲಿ| Krishnaveni K| Last Modified ಮಂಗಳವಾರ, 8 ಅಕ್ಟೋಬರ್ 2019 (09:56 IST)
ನವದೆಹಲಿ: ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾರೀ ಹಣ ಕಳೆದುಕೊಂಡರೆಂದು ತಾವು ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿಯಿಂದಲೇ 25 ಕೆಜಿ ಚಿನ್ನ ಕದ್ದು ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

 
ದೆಹಲಿಯಲ್ಲಿ ಈ ಘಟನೆ ನಡೆದಿದೆ. 30 ಭರತ್ ಮತ್ತು ಆತನ ಸಹಚರರು ಬಂಧಿತ ಆರೋಪಿಗಳು. ಐಪಿಎಲ್ ಬೆಟ್ಟಿಂಗ್ ನಡೆಸಿ ಇವರು ಭಾರೀ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದು.
 
ಆ ಹಣವನ್ನು ಸರಿದೂಗಿಸಲು ಭರತ್ ತನ್ನ ಸಹಚರರೊಂದಿಗೆ ತಾನು ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿಯಿಂದ ಚಿನ್ನಾಭರಣಗಳನ್ನು ಮಾಡಿದ್ದಾನೆ. ಮುಖ್ಯ ಕಚೇರಿಯಿಂದ ಸಹ ಕಚೇರಿಗೆ ಚಿನ್ನಾಭರಣ ಕೊಂಡೊಯ್ಯುವ ಕೆಲಸ ಈತನದಾಗಿತ್ತು. ಆದರೆ ಈ ವೇಳೆ ಪೂರ್ತಿ ಚಿನ್ನಾಭರಣವನ್ನು ಕಚೇರಿಗೆ ನೀಡದೇ ವಂಚಿಸಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :