ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ಹೊರಗೆಸೆದ ಅಪರಿಚಿತ ವ್ಯಕ್ತಿ

ವಡಾಲಾ| pavithra| Last Modified ಭಾನುವಾರ, 3 ಜನವರಿ 2021 (07:56 IST)
ವಡಾಲಾ : 25 ವರ್ಷದ ಮಹಿಳೆಯನ್ನು ಅಪರಿಚಿತ ವ್ಯಕ್ತಿಯೊಬ್ಬ ರೈಲಿನಿಂದ ಹೊರಗೆಸೆದ  ಘಟನೆ ವಡಾಲಾ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರೈಲು ವಡಾಲಾ ರೈಲ್ವೆ ನಿಲ್ದಾಣವನ್ನು ತಲುಪಿದ ಕೂಡಲೇ ಆರೋಪಿ ಮಹಿಳೆಗೆ  ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ. ಆಕೆಯ ಮುಂದೆ ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ. ಆಗ ಮಹಿಳೆ ಸಹಾಯಕ್ಕಾಗಿ ಕೂಗಿದಾಗ ಆರೋಪಿ ಆಕೆಯನ್ನು ಹಿಡಿದುಕೊಂಡು ಚಲಿಸುವ ರೈಲಿನಿಂದ ಹೊರಗೆ ಎಸೆದಿದ್ದಾನೆ.

ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವಳ ಬಲಗೈ ಮುರಿತಕ್ಕೊಳಗಾಗಿದೆ. ಆರೋಪಿ ವಿರುದ್ಧ ದಾಖಲಾಗಿದ್ದು, ಪೊಲೀಸರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :