ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಮಾನಭಂಗ ಎಸಗಿದ ಕಾಮುಕರು

ಚೆನ್ನೈ| pavithra| Last Modified ಮಂಗಳವಾರ, 12 ಜನವರಿ 2021 (10:22 IST)
ಚೆನ್ನೈ : ಚೆನ್ನೈನ ತಂಬರಂ ನಲ್ಲಿ ರೈಲಿನಲ್ಲಿ ಮಲಗಿದ್ದ ಹಣ್ಣು ಮಾಡುತ್ತಿದ್ದ 40 ವರ್ಷದ ಮಹಿಳೆಯ ಮೇಲೆ ಇಬ್ಬರು ಗುತ್ತಿಗೆ ಕಾರ್ಮಿಕರು ಮಾನಭಂಗ ಎಸಗಿದ್ದಾರೆ.

ಹಣ್ಣು ಮಾರಾಟ ಮಾಡಿ ಮಹಿಳೆ ಮಲಗಿರುವುದನ್ನು ನೋಡಿದ ಕಾರ್ಮಿಕರು  ರೈಲು ಸ್ವಚ್ಚ ಮಾಡುವ ನೆಪದಲ್ಲಿ ಬಂದು ಆಕೆಯ ಮೇಲೆ ಮಾನಭಂಗ ಎಸಗಿದ್ದಾರೆ. ಹಾಗೇ ಈ ವಿಚಾರವನ್ನು ಯಾರಿಗಾದರೂ ತಿಳಿಸದರೆ ರೈಲಿನಲ್ಲಿ ಕದಿಯಲು ಬಂದಿದ್ದಾಳೆಂದು ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆದರೆ ಮಹಿಳೆ ಈ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :