ಕಾಶ್ಮೀರದ ಜನರಿಗಾದ ಅನ್ಯಾಯವನ್ನು ಮೋದಿ ಒಪ್ಪಿಕೊಳ್ಳಬೇಕು: ಗಿಲಾನಿ

ಶ್ರೀನಗರ್| Jaya| Last Updated: ಸೋಮವಾರ, 19 ಮೇ 2014 (11:47 IST)
ಭಾವಿ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ  ನ್ಯಾಯ ತರುವ ಬಗ್ಗೆ ಗಂಭೀರ ನಿಲುವು ತಳೆದಿದ್ದಾರೆ ಎನ್ನುವುದು ನಿಜವಾದರೆ, ಮೊದಲು ಅವರು ಕಾಶ್ಮೀರದ ಜನರಿಗೆ ಅನ್ಯಾಯವಾಗಿದೆ ಎಂಬುದನ್ನು  ಸ್ವೀಕರಿಸ ಬೇಕು ಎಂದು   ಹುರ್ರಿಯತ್ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಹೇಳಿದ್ದಾರೆ.
 
"ಕಾಶ್ಮೀರಿಗಳ ಪರ ನ್ಯಾಯ ತೀರ್ಮಾನವಾದರೆ, ಅದು ನಿಜವಾಗಿಯೂ ಭಾರತೀಯರು ಮತ್ತು ಏಷ್ಯನ್ನರ ಪಾಲಿಗೆ ಕಲ್ಯಾಣಕರವಾಗಿರುತ್ತದೆ. ಪರಿಣಾಮ ಇಡೀ ದಕ್ಷಿಣ ಏಷ್ಯಾ ಪ್ರಾಂತದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗುತ್ತದೆ " ಎಂದು ಗಿಲಾನಿ ಅಭಿಪ್ರಾಯ ಪಟ್ಟಿದ್ದಾರೆ. 
 
ತಾನು ಕಾಶ್ಮೀರದಿಂದ ಕನ್ಯಾಕುಮಾರಿವರೆ ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂದು ಮೋದಿ ಇತ್ತೀಚಿಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುರಿಯತ್ ನಾಯಕ ಈ ಮಾತುಗಳನ್ನಾಡಿದ್ದಾರೆ. 
 
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಲಾಗಲಿಲ್ಲ ಎಂದು ಮೋದಿ ದುಃಖ ವ್ಯಕ್ತ ಪಡಿಸಿದ್ದಾರೆ. ಆದರೆ ಚಳುವಳಿಯನ್ನು ನಿಜವಾದ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳುವ ಅವಕಾಶ ಅವರಿಗಿದೆ ಎಂದು ಹುರಿಯತ್ ನಾಯಕ ಮೋದಿಗೆ ಸವಾಲು  ಹಾಕಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :