Widgets Magazine

ಕೊನೆಯ ಬಾರಿಗೆ ಕುಟುಂಬಸ್ಥರ ಭೇಟಿಗೆ ನಿರ್ಭಯಾ ಅಪರಾಧಿಗಳಿಗೆ ಅವಕಾಶ

ನವದೆಹಲಿ| Krishnaveni K| Last Modified ಬುಧವಾರ, 15 ಜನವರಿ 2020 (11:25 IST)
ನವದೆಹಲಿ: ಜನವರಿ 22 ರಂದು ಗಲ್ಲು ಶಿಕ್ಷೆಗೆ ಒಳಗಾಗಲಿರುವ ನಿರ್ಭಯಾ ಗ್ಯಾಂಗ್ ರೇಪ್ ಆರೋಪಿಗಳಿಗೆ ಶಿಕ್ಷೆ ಜಾರಿಯಾಗುವ ಮುನ್ನ ಕುಟುಂಬಸ್ಥರಿಗೆ ಭೇಟಿಯಾಗಲು ಅವಕಾಶ ನೀಡಲಾಗಿದೆ.

 
ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಕ್ಯುರೇಟಿವ್ ಅರ್ಜಿ ವಜಾಗೊಳಿಸಲು ಗಲ್ಲು ಶಿಕ್ಷೆ ಎತ್ತಿಹಿಡಿದ ಬೆನ್ನಲ್ಲೇ ಅಪರಾಧಿಗಳ ಕುಟುಂಬಸ್ಥರಿಗೆ ಇನ್ನು ಶಿಕ್ಷೆ ಜಾರಿಯಾಗುವವರೆಗೆ ವಾರದಲ್ಲಿ ಎರಡು ಬಾರಿ ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ.
 
ಈಗಾಗಲೇ ಕೊನೆಯ ಬಾರಿಗೆ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಬಯಸುವಿರಾ ಎಂದು ಅಪರಾಧಿಗಳಿಗೆ ಕೇಳಲಾಗಿದೆ. ಆದರೆ ಯಾರೂ ಉತ್ತರಿಸಿಲ್ಲ. ಹೀಗಾಗಿ ನಿಯಮದ ಪ್ರಕಾರ ಕೊನೆಯ ಬಾರಿಗೆ ಒಮ್ಮೆ ಕುಟುಂಬಸ್ಥರನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ವ್ಯವಸ್ಥೆ ಮಾಡಲಿದ್ದು, ಜನವರಿ 20 ರಂದು ಈ ಭೇಟಿ ಸಾಧ‍್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :