ನವದೆಹಲಿ|
Krishnaveni K|
Last Modified ಸೋಮವಾರ, 13 ಜನವರಿ 2020 (09:58 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ನಾಲ್ವರು ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಲು ಇನ್ನು ಕೆಲವೇ ದಿನ ಬಾಕಿಯಿದೆ. ಈ ಹಿನ್ನಲೆಯಲ್ಲಿ ತಿಹಾರ್ ಜೈಲ್ ನಲ್ಲಿ ತಯಾರಿ ಜೋರಾಗಿ ನಡೆದಿದೆ.
ಜನವರಿ 22 ರಂದು ನಾಲ್ವರು ಆರೋಪಿಗಳನ್ನು ನ್ಯಾಯಾಲಯದ ಆದೇಶದಂತೆ ಗಲ್ಲಿಗೇರಿಸಲಾಗುತ್ತದೆ. ಅದಕ್ಕಾಗಿ ಪರಿಣಿತ ಹ್ಯಾಂಗ್ ಮ್ಯಾನ್ ಗಳಿಂದ ತಯಾರಿ ನಡೆಸಲಾಗುತ್ತಿದೆ.
ಗಲ್ಲಿಗೇರಿಸಲು ಹ್ಯಾಂಗ್ ಮ್ಯಾನ್ ಗಳು ಸಿದ್ಧತೆ ನಡೆಸಿದ್ದು, ಮರಳು ಚೀಲಗಳನ್ನು ಬಳಸಿ ಪ್ರಾತ್ಯಕ್ಷಿಕೆ ನಡೆಸಿದ್ದಾರೆ. ಈ ವೇಳೆ ನೇಣಿಗೇರಿಸಲು ಎಲ್ಲಾ ವ್ಯವಸ್ಥೆ ಸರಿಯಾಗಿದೆಯೇ ಎಂದು ಖಚಿತಪಡಿಸಲಾಯಿತು.