ಮೋದಿಯನ್ನು ರಿಮೋಟ್ ಕಂಟ್ರೋಲ್‌ನಂತೆ ಬಳಸುವುದಿಲ್ಲ: ಆರ್‌ಎಸ್ಎಸ್

ನಾಗ್ಪುರ್| Jaya| Last Modified ಶನಿವಾರ, 17 ಮೇ 2014 (18:58 IST)
ಮುಂದಿನ ವಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ ಮುಂದಾಳತ್ವದ ಎನ್‌ಡಿಎ ಸರಕಾರಕ್ಕೆ ಸಲಹೆಗಳನ್ನು ನೀಡಲು ಸದಾ ಸಿದ್ಧರಾಗಿದ್ದೇವೆ. ಆದರೆ ನಾವು ರಿಮೋಟ್ ಕಂಟ್ರೋಲ್ ತರಹ ಸರಕಾರವನ್ನು ನಿಯಂತ್ರಿಸುವುದಿಲ್ಲ ಎಂದು ಬಿಜೆಪಿಯ ಸೈಂದ್ಧಾಂತಿಕ ಮಾರ್ಗದರ್ಶಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿದೆ.
 
ಬಿಜೆಪಿ ಸರಕಾರದಲ್ಲಿ ನೀವು ಯಾವ ಪಾತ್ರವನ್ನು ವಹಿಸಲಿದ್ದೀರಿ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿಯವರನ್ನು ಕೇಳಿದಾಗ ಉತ್ತರಿಸಿದ ಅವರು ನಾವಾಗಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಅವರು ಸಲಹೆಯನ್ನು ಕೇಳಿದರೆ ಅದಕ್ಕೆ ಸ್ಪಂದಿಸಲಿದ್ದೇವೆ ಎಂದು ಹೇಳಿದರು. 
 
ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಲ್ಪಡುವ ಸರಕಾರ ಪ್ರಜಾಪ್ರಭುತ್ವಕ್ಕೆ ಉತ್ತಮವಲ್ಲ ಎಂದು ಜೋಶಿ ಅಭಿಪ್ರಾಯ ಪಟ್ಟರು. 
 
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾಗಿರುವ ಆರ್‌ಎಸ್ಎಸ್ ಬಿಜೆಪಿ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಪಕ್ಷದೊಳಗಿನ ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಸದಾ ತತ್ಪರವಾಗಿರುತ್ತದೆ. 
 
ಮೋದಿ ಆರ್‌ಎಸ್ಎಸ್ ನ ಕಟ್ಟಾ ಅನುಯಾಯಿಯಾಗಿದ್ದು, 63 ವರ್ಷದ ಬಿಜೆಪಿ ನಾಯಕ ತಮ್ಮ 30 ನೇ ವರ್ಷದಿಂದ, ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  "ಹಿಂದುತ್ವ" ಅಥವಾ ರಾಷ್ಟ್ರೀಯತಾವಾದಿ ಕಾರ್ಯಸೂಚಿಗೆ ಮೋದಿ ಪ್ರಯತ್ನಿಸಲಿದ್ದಾರೆ ಎಂದು ಸಂಘದ  ಸದಸ್ಯರು ಆಶಾಭಾವ ವ್ಯಕ್ತಪಡಿಸಿದ್ದಾರೆ.
 
ರಾಮ ಮಂದಿರವನ್ನು ನಿರ್ಮಿಸುವುದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿದ್ದು ಸರಕಾರ ತನ್ನ ವಾಗ್ದಾನವನ್ನು ಉಳಿಸಿಕೊಳ್ಳಲಿದೆ ಎಂದು ಜೋಶಿ ಭರವಸೆ ಹೊಂದಿದ್ದಾರೆ. ಹಿಂದೂ ಕರ ಸೇವಕರಿಂದ 1992ರಲ್ಲಿ ಅಯೋಧ್ಯಾದಲ್ಲಿ ಬಾಬ್ರಿ ಮಸೀದಿ ನಾಶವಾದ ಜಾಗದಲ್ಲಿ ಶ್ರೀರಾಮನ ದೇವಾಲಯವನ್ನು ಸ್ಥಾಪಿಸ ಬೇಕೆಂಬುದು 
ಸಂಘದ ಬಯಕೆ. ಇದರಲ್ಲಿ ಇನ್ನಷ್ಟು ಓದಿ :