ಮಧ್ಯರಾತ್ರಿ ಮನೆಗೆ ಬಂದು ಕೊಲೆ ಮಾಡಿದೆ ಎಂದು ಬಡಬಡಿಸಿದ್ದ ಪ್ರಿಯಾಂಕಾ ರೆಡ್ಡಿ ಪ್ರಕರಣದ ಆರೋಪಿ

ಹೈದರಾಬಾದ್| Krishnaveni K| Last Updated: ಸೋಮವಾರ, 2 ಡಿಸೆಂಬರ್ 2019 (10:40 IST)
ಹೈದರಾಬಾದ್: ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಅತ್ಯಾಚಾರ ಮಾಡಿ ಪೈಶಾಚಿಕವಾಗಿ ಕೊಲೆ ಮಾಡಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಅದೇ ದಿನ ಮನೆಗೆ ಬಂದು ತಾನೊಬ್ಬಳನ್ನು ಕೊಲೆ ಮಾಡಿದ್ದಾಗಿ ಹೇಳಿದ್ದನಂತೆ! ಹೀಗಂತ ಆತನ ತಾಯಿ ಹೇಳಿಕೊಂಡಿದ್ದಾರೆ.

 
ಘಟನೆ ನಡೆದ ದಿನ ಅಂದರೆ ನವಂಬರ್ 29 ರಂದು ತಡರಾತ್ರಿ 1 ಗಂಟೆಗೆ ಮನೆಗೆ ಬಂದಿದ್ದ ಮೊಹಮ್ಮದ್ ಭಯದಿಂದ ನಡುಗುತ್ತಿದ್ದ. ‘ನಾನು ಯಾರನ್ನೋ ಕೊಲೆ ಮಾಡಿ ಬಂದೆ’ ಎಂದು ಬಡಬಡಿಸಿದ.
 
ಏನಾಯಿತೆಂದು ಕೆದಕಿ ಕೇಳಿದಾಗ ‘ಲಾರಿಯನ್ನು ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತಿರುಗಿಸುತ್ತಿದ್ದಾಗ ಸ್ಕೂಟರ್ ನಲ್ಲಿ ಬರುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದೆ. ಆ ರಭಸಕ್ಕೆ ಅವಳು ಮೃತಪಟ್ಟಳು’ ಎಂದು ಹೇಳಿದ್ದ. ಮಧ್ಯರಾತ್ರಿ 3 ಗಂಟೆಗೆ ಪೊಲೀಸರು ನಮ್ಮ ಮನೆ ಬಾಗಿಲು ತಟ್ಟಿ ಅವನನ್ನು ಬಂಧಿಸಿ ಕರೆದೊಯ್ದರು ಎಂದು ಆರೋಪಿಯ ತಾಯಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :