ರಾಹುಲ್ ಗಾಂಧಿ ಅಪ್ಪುಗೆ ನೋಡಿ ನಟಿ ರಮ್ಯಾ ಭೂಕಂಪವಾಯ್ತು ಎಂದಿದ್ದು ಯಾರಿಗೆ?

ಬೆಂಗಳೂರು| Krishnaveni K| Last Updated: ಶುಕ್ರವಾರ, 20 ಜುಲೈ 2018 (16:31 IST)
ಬೆಂಗಳೂರು: ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದ ನಡುವೆ ಎದ್ದು ಹೋಗಿ ಪ್ರಧಾನಿ ಮೋದಿಯನ್ನು ಅಪ್ಪಿಕೊಂಡ ವಿಚಾರ ಇದೀಗ ವೈರಲ್ ಆಗಿದೆ.


ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ರಾಹುಲ್ ನಡೆ ಬಗ್ಗೆ ಟ್ವೀಟ್ ಮಾಡಿದ್ದಾರೆ.


ಹಿಂದೊಮ್ಮೆ ರಾಹುಲ್ ನಾನು ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪವಾಗುತ್ತದೆ ಎಂದಿದ್ದರು. ಇದನ್ನೇ ಉಲ್ಲೇಖಿಸಿ ಟ್ವೀಟ್ ಮಾಡಿರುವ ರಮ್ಯಾ ‘ಬಿಜೆಪಿಯವರಿಗೆ ಈಗ ನಿಜವಾಗಿಯೂ ಭೂಕಂಪವಾದ ಅನುಭವವಾಗುತ್ತಿದೆ. ಪಾಪ ಬಿಜೆಪಿಯಲ್ಲಿ ಕೆಲವು ಮೃದು ಹೃದಯಿಗಳಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.


ಆದರೆ ರಮ್ಯಾ ಟ್ವೀಟ್ ಗೆ ಹಲವು ಪ್ರತಿಕ್ರಿಯಿಸಿದ್ದು, ಹೆಚ್ಚಿನ ಮಂದಿ ಟ್ರೋಲ್ ಮಾಡಿದ್ದಾರೆ. ಇದೆಲ್ಲಾ ಪೂರ್ವನಿರ್ಧಾರಿತ ನಾಟಕ ಎಂದು ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :