ಬಿಸ್ಕತ್ ಖರೀದಿಸಲು ಬಂದ ಹುಡುಗಿಯ ಮೇಲೆ ಮಾನಭಂಗ ಎಸಗಿ ಕೊಂದ ಕಿರಾಣಿ ಅಂಗಡಿಯವ

ಇಂದೋರ್| pavithra| Last Modified ಬುಧವಾರ, 13 ಜನವರಿ 2021 (10:18 IST)
ಇಂದೋರ್ : 13 ವರ್ಷದ ಹುಡುಗಿಯ ಮೇಲೆ 45 ವರ್ಷದ ಕಿರಾಣಿ ಅಂಗಡಿಯವನ್ನು ಮಾನಭಂಗ ಎಸಗಿ ಬಳಿಕ ಆತನ ಪತ್ನಿಯ ಸಹಾಯದಿಂದ ಹುಡುಗಿಯ ಕತ್ತು ಹಿಸುಕಿ ಕೊಂದ ಘಟನೆ ಭೋಪಾಲ್ ನ ಖಂಡವಾ ಜಿಲ್ಲೆಯಲ್ಲಿ ನಡೆದಿದೆ.

ಹುಡುಗಿ ಬಿಸ್ಕತ್ತು ಖರೀದಿಸಲು ಆರೋಪಿಯ ಅಂಗಡಿಗೆ ಬಂದಿದ್ದ ವೇಳೆ ಆಕೆಯನ್ನು ಪುಸಲಾಯಿಸಿ ಮನೆಗೆ ಕರೆದು ಇಂತಹ ಕೃತ್ಯ ಎಸಗಿದ್ದಾನೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆರೋಪಿ ಮತ್ತು ಆತನ ಪತ್ನಿ ಸೇರಿ ಕತ್ತು ಹಿಸುಕಿ ಕೊಂದು ಗೋಣಿಚೀಲದಲ್ಲಿ ತುಂಬಿ ಟೆರೇಸ್ ಮೇಲೆ ಇಟ್ಟಿದ್ದಾರೆ. ಇದನ್ನು ನೋಡಿದ ನೆರೆಮನೆಯವರು ಕುಟುಂಬದವರಿಗೆ ವಿಚಾರ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

 


ಇದರಲ್ಲಿ ಇನ್ನಷ್ಟು ಓದಿ :