ಕಾರು ಅಪಘಾತದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಗಂಭೀರ, ಪತ್ನಿ, ಕಾರ್ಯದರ್ಶಿ ಸಾವು

ಅಂಕೋಲಾ| Krishnaveni K| Last Modified ಮಂಗಳವಾರ, 12 ಜನವರಿ 2021 (09:39 IST)
ಅಂಕೋಲಾ: ಇಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಪತ್ನಿ ಮತ್ತು ಕಾರ್ಯದರ್ಶಿ ಸಾವನ್ನಪ್ಪಿದರೆ, ಸಚಿವರು ಗಂಭೀರ ಗಾಯಗೊಂಡಿದ್ದಾರೆ.
 

ಯಲ್ಲಾಪುರದ ಗಂಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಎಸ್ಕಾರ್ಟ್ ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ ಸಚಿವರಿದ್ದ ಕಾರು ಪಲ್ಟಿಯಾಗಿದೆ. ಈ ಅಪಘಾತಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಅವರ ಪತ್ನಿ ವಿಜಯಾ ನಾಯ್ಕ್ ಮತ್ತು ಕಾರ್ಯದರ್ಶಿ ದೀಪಕ್ ದುಬೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಚಿವರನ್ನು ಪಣಜಿ ಬಾಂಬೂಲಿಯಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :