ಭಾರತ -ಪಾಕ್ ಗಡಿಯಲ್ಲಿ ಮತ್ತೆ ಹಾರಾಡಿದ ಶಂಕಿತ ಡ್ರೋನ್

ಜಮ್ಮು| Ramya kosira| Last Modified ಸೋಮವಾರ, 23 ಆಗಸ್ಟ್ 2021 (14:01 IST)
ಜಮ್ಮು: ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಹಾರಾಟ ಹೆಚ್ಚುತ್ತಲೇ ಇದೆ. ಇದೀಗ ಇಂದು ಮತ್ತೆ ಶಂಕಿತ ಡ್ರೋನ್ ಹಾರಾಟ ನಡೆದಿದ್ದು, ಕೂಡಲೇ ಎಚ್ಚೆತ್ತ ಬಿಎಸ್ ಎಫ್ ಯೋಧರು ಅದನ್ನು ಗುಂಡು ಹಾರಿಸಿ ನೆಲಕ್ಕುರುಳಿಸಿದ್ದಾರೆ.
ಜಮ್ಮುವಿನ ಅರ್ನಿಯಾ ಸೆಕ್ಟರ್ನ ಅಂತರರಾಷ್ಟ್ರೀಯ ಗಡಿಯಲ್ಲಿ ಇಂದು ಮುಂಜಾನೆ ಭಾರತದತ್ತ ಬರುತ್ತಿದ್ದ ಶಂಕಿತ ಹಾರುವ ವಸ್ತುವೊಂದನ್ನು ಗುರುತಿಸಿದ ಬಿಎಸ್ಎಫ್ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದ್ದು, ಅದು ಪಾಕಿಸ್ತಾನದತ್ತ ಬಿದ್ದಿದೆ. 'ಬೆಳಿಗ್ಗೆ 5.30ರ ಸುಮಾರಿಗೆ ಆಗಸದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ನೆಳಕು ಕಾಣಿಸಿತು. ತಕ್ಷಣ ಎಚ್ಚೆತ್ತ ಬಿಎಸ್ಎಫ್ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದರು. ಹಾರುವ ವಸ್ತು ಬಳಿಕ ಪಾಕಿಸ್ತಾನದತ್ತ ಬಿದ್ದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.>  >


ಇದರಲ್ಲಿ ಇನ್ನಷ್ಟು ಓದಿ :