12 ವರ್ಷದ ಲಿವಿಂಗ್ ಟು ಗೇದರ್ ಅಂತ್ಯವಾಗಿದ್ದು ಕೊಲೆಯಲ್ಲಿ!

ಮುಂಬೈ| pavithra| Last Modified ಸೋಮವಾರ, 28 ಡಿಸೆಂಬರ್ 2020 (11:08 IST)
ಮುಂಬೈ : 44 ವರ್ಷದ ಮಹಿಳೆಯನ್ನು ಆಕೆ ಸಂಬಂಧ ಹೊಂದಿದ್ದ ವ್ಯಕ್ತಿ ಕತ್ತು ಹಿಸುಕಿ ಕೊಂದ ಘಟನೆ ಮುಂಬೈನಲ್ಲಿ ನಡೆದಿದೆ.

ಮೃತಳು ಹಾಗೂ ಆರೋಪಿ 12 ವರ್ಷಗಳಿಂದ ಲಿವಿಂಗ್ ಟು ಗೇದರ್ ಸಂಬಂಧದಲ್ಲಿದ್ದರು. ಇತ್ತೀಚೆಗೆ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ. ಇಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದು, ಆ ವೇಳೆ ವ್ಯಕ್ತಿ ಆಕೆಯ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದು ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :