ಹೆತ್ತ ಮಗುವನ್ನು ಇಯರ್ ಫೋನ್ ನಿಂದ ಸುತ್ತಿ ಕೊಂದ ತಾಯಿ

ಮಂಗಳೂರು| pavithra| Last Modified ಶುಕ್ರವಾರ, 8 ಜನವರಿ 2021 (06:41 IST)
ಮಂಗಳೂರು :  ತಾಯಿಯೊಬ್ಬಳು ಹೆತ್ತ ಮಗುವನ್ನೇ ಇಯರ್ ಫೋನ್ ನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ.

ಆರೋಪಿ ಮಹಿಳೆಗೆ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ವೇಳೆ ವೈದ್ಯರು ಆಕೆಗೆ ಹೆರಿಗೆಯಾಗಿರುವುದಾಗಿ ತಿಳಿಸಿದ್ದಾರೆ. ಮನೆಯವರು ಮನೆಗೆ ಬಂದು ಮಗುವನ್ನು ಹುಡಕಾಡಿದಾಗ ಶಿಶುವಿನ ಶವ ಸಿಕ್ಕಿದೆ. ಈ ಬಗ್ಗೆ  ಮಹಿಳೆಯ ಬಳಿ ವಿಚಾರಿಸಿದಾಗ ಆಕೆ ತಾನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :