Widgets Magazine

ಕಾಮತೃಷೆ ತೀರಿಸದ್ದಕ್ಕೆ ಯುವತಿಗೆ ದುರುಳರು ಮಾಡಿದ್ದೇನು ಗೊತ್ತಾ?!

ತೆಲಂಗಾಣ| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (09:49 IST)
ತೆಲಂಗಾಣ: ಇತ್ತೀಚೆಗಷ್ಟೇ ಹತ್ರಾಸ್ ನಲ್ಲಿ ದಲಿತ ಯವತಿಯ ಮೇಲಿನ ದೌರ್ಜನ್ಯ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ಆದರೆ ತೆಲಂಗಾಣದಲ್ಲಿ ಈಗ ಅಂತಹದ್ದೇ ಮತ್ತೊಂದು ಕ್ರೌರ್ಯ ವರದಿಯಾಗಿದೆ.

 
ಕಾಮತೃಷೆ ತೀರಿಸಿಕೊಳ್ಳಲು ಬಿಡದ 13 ವರ್ಷದ ಬುಡಕಟ್ಟು ಜನಾಂಗದ ಅಪ್ರಾಪ್ತೆಯನ್ನು ದುರುಳರು ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸೆಪ್ಟೆಂಬರ್ 19 ರಂದು ಘಟನೆ ನಡೆದಿತ್ತು. ಆದರೆ ಗಂಭೀರ ಗಾಯಗೊಂಡ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಯುವತಿ ಗಾಯದಿಂದ ಚೇತರಿಸಿಕೊಳ್ಳದೇ ಸಾವನ್ನಪ್ಪಿದ್ದಾಳೆ. ಇದೀಗ ಆರೋಪಿಗಳ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :