ದೇಶಕ್ಕಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ: ಮನಮೋಹನ್ ಸಿಂಗ್

ನವದೆಹಲಿ| Jaya| Last Modified ಶನಿವಾರ, 17 ಮೇ 2014 (17:11 IST)
ದೇಶದ ಜನತೆಯನ್ನು ಉದ್ದೇಶಿಸಿ ತಮ್ಮ ಕೊನೆಯ ಭಾಷಣ ಮಾಡಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, "ದೇಶಕ್ಕೆ ಸೇವೆ ಸಲ್ಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ, ನನ್ನ ಜೀವನ ಮತ್ತು ಅಧಿಕಾರಾವಧಿ ತೆರೆದ ಪುಸ್ತಕ ಎಂದು" ಹೇಳಿದ್ದಾರೆ. 
 
ಹಿಂದಿ  ಭಾಷೆಯಲ್ಲಿ ಮಾತನಾಡಿದ ತರುವಾಯ ಇಂಗ್ಲೀಷ್‌ನಲ್ಲಿ ಮಾತನಾಡಿದ ಸಿಂಗ್ ಜನರು ಕೊಟ್ಟ ತೀರ್ಪಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಹೇಳಿದರು. 
 
"ನಾನು ಯಾವಾಗಲೂ ಈ ಮಹಾನ್ ದೇಶಕ್ಕಾಗಿ ಸೇವೆ ಸಲ್ಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ. ಕಳೆದ 10 ವರ್ಷಗಳಲ್ಲಿ ಭಾರತ ಅನೇಕ ಯಶಸ್ಸನ್ನು ಮತ್ತು ಸಾಧನೆಯನ್ನು ಕಂಡಿದೆ. ಅದಕ್ಕಾಗಿ ನಾವು ಹೆಮ್ಮೆ ಪಟ್ಟುಕೊಳ್ಳ ಬೇಕು "ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
 
ರಾಷ್ಟ್ರಪತಿಯನ್ನು ಭೇಟಿಯಾಗಿ ರಾಜೀನಾಮೆಯನ್ನು ನೀಡುವ ಮೊದಲು ಅವರು ತಮ್ಮ ಕೊನೆಯ ಕ್ಯಾಬಿನೆಟ್ ಸಭೆಯನ್ನು ನಡೆಸಿ, 15ನೇ ಲೋಕಸಭೆಯನ್ನು ವಿಸರ್ಜಿಸುವ ನಿರ್ಣಯ ಮಂಡಿಸಿದರು 
 
ಸ್ಥಾನ ತ್ಯಜಿಸಿ ಹೊರಹೋಗುತ್ತಿರುವ ಪ್ರಧಾನಿ ಮತ್ತು ಮಂತ್ರಿ ಮಂಡಲಕ್ಕೆ ಇಂದು ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾತ್ರಿ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :