ಚಿಕನ್ ಬಡಿಸಲು ಒಲ್ಲೆ ಎಂದ ಮಾಲೀಕನ ಹೋಟೆಲ್ ಗೆ ಇಂತಹ ಗತಿ ತಂದ ವ್ಯಕ್ತಿಗಳು

ಮಹಾರಾಷ್ಟ್ರ| pavithra| Last Modified ಮಂಗಳವಾರ, 12 ಜನವರಿ 2021 (10:00 IST)
: ಮಹಾರಾಷ್ಟ್ರದ ನಾಗ್ಪುರದ ರಸ್ತೆ ಬದಿಯ ಹೋಟೆಲ್ ಗೆ ಇಬ್ಬರು ವ್ಯಕ್ತಿಗಳು ಸೇರಿ ಬೆಂಕಿ ಹಚ್ಚಿದ ಘಟನೆ
ನಡೆದಿರುವುದಾಗಿ ತಿಳಿದುಬಂದಿದೆ.


ಶಂಕರ್ ಟೇಡೆ(29) ಮತ್ತು ಸಾಗರ್ ಪಟೇಲ್(19) ಇಂತಹ ಕೃತ್ಯ ಎಸಗಿದ ಆರೋಪಿಗಳು. ಇವರು ತಡರಾತ್ರಿಯ ವೇಳೆ ಹೋಟೆಲ್ ಗೆ ಭೇಟಿ ನೀಡಿ ಚಿಕನ್ ಬಡಿಸುವಂತೆ ಕೇಳಿದ್ದಾರೆ. ಇದಕ್ಕೆ ಹೋಟೆಲ್ ಮಾಲೀಕ ನಿರಾಕರಿಸಿದ ಹಿನ್ನಲೆಯಲ್ಲಿ ಆತನ ಹೋಟೆಲ್ ಗೆ ಬೆಂಕಿ ಹಚ್ಚಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :