ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯ ಮನೆಗೆ ನುಗ್ಗಿದ ಯುವಕ ಹೀಗಾ ಮಾಡೋದು?

ಭೋಪಾಲ್| pavithra| Last Modified ಮಂಗಳವಾರ, 12 ಜನವರಿ 2021 (10:08 IST)
ಭೋಪಾಲ್ : ನಾಲ್ವರು ಯುವಕರು ಮನೆಗೆ ನುಗ್ಗಿ 25 ವರ್ಷದ ಯುವತಿಯ ಬಟ್ಟೆಗಳನ್ನು ಆಕೆಯ ಸಹೋದರನ ಮುಂದೆಯೇ ಹರಿದು ಹಾಕಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಆರೋಪಿ ಸ್ಥಳೀಯ ನಿವಾಸಿ ಮತ್ತು ಆತನ  ಸ್ನೇಹಿತರು ಎಂಬುದಾಗಿ ತಿಳಿದುಬಂದಿದೆ. ಈತ ಯುವತಿ ಹಾಗೂ ಆಕೆಯ ಮನೆಯವರಿಗೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ. ಆದರೆ ಮನೆಯವರು ಆಕೆಗೆ ಬೇರೆ ಮದುವೆ ಮಾಢಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಆತ ಆಕೆಯನ್ನು ಯಾರು ಮದುವೆಯಾಗಬಾರದೆಂದು ಇಂತಹ ಕೃತ್ಯ ಎಸಗಿದ್ದಾನೆ.

ಈ ಬಗ್ಗೆ ಯುವತಿಯ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :