ಲುಧಿಯಾನ|
pavithra|
Last Modified ಭಾನುವಾರ, 22 ನವೆಂಬರ್ 2020 (07:47 IST)
ಲುಧಿಯಾನ : ಮದುವೆಯಾಗಿ ಮನೆಗೆ ಬಂದ ಮಹಿಳೆ ತನ್ನ ಗಂಡನ ಮನೆಯಲ್ಲಿರುವ ಚಿನ್ನ, ಹಣವನ್ನು ಕದ್ದು ತನ್ನ ಲವರ್ ಜೊತೆ ಪರಾರಿಯಾದ ಘಟನೆ ಲೂಧಿಯಾನದಲ್ಲಿ ನಡೆದಿದೆ.
ಕಮಲ್ ಪ್ರೀತ್ ಕೌರ್ ಆರೋಪಿ ಮಹಿಳೆ. ಈಕೆ ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದಾಳೆ. ಆದರೆ ಈಕೆ ಮನೆಯಲ್ಲಿ ಪತಿ ಇಲ್ಲದ ವೇಳೆ ತನ್ನ ಸಂಬಂಧಿಕನೆಂದು ಒಬ್ಬನನ್ನು ಕರೆಸಿಕೊಂಡು
ಹಣ ಚಿನ್ನ ತೆಗೆದುಕೊಂಡು ಆತನನ್ನು ಬಸ್ ಸ್ಟ್ಯಾಂಡ್ ಗೆ ಬಿಟ್ಟು ಬರುವ ನೆಪದಲ್ಲಿ ಮನೆಯಿಂದ ಓಡಿಹೋಗಿದ್ದಾಳೆ.
ಆಕೆ ಮನೆಗೆ ಹಿಂತಿರುಗದೆ ಇದ್ದಾಗ ಹಾಗೂ ಮನೆಯಲ್ಲಿ ಹಣ ಚಿನ್ನ ಇಲ್ಲದಿರುವುದನ್ನು ಕಂಡಾಗ ಪತಿ ಮನೆಯವರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆಕೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.