ಬೈಕ್ ಕದ್ದ ತಪ್ಪಿಗೆ ಯುವಕನ ಥಳಿಸಿದ ಕೊಂದ ಸ್ಥಳೀಯರು

ಪಾಟ್ನಾ| Krishnaveni K| Last Modified ಭಾನುವಾರ, 12 ಸೆಪ್ಟಂಬರ್ 2021 (09:40 IST)
ಪಾಟ್ನಾ: ಬೈಕ್ ಕದ್ದ ತಪ್ಪಿಗೆ 24 ವರ್ಷದ ಯುವಕನನ್ನು ಸ್ಥಳೀಯರೇ ಥಳಿಸಿದ್ದು ಪರಿಣಾಮ ಆತ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ.  
> ಜಹೀದ್ ಎಂಬಾತ ಸಾವನ್ನಪ್ಪಿದ ಯುವಕ. ಈತ ಮೋಟಾರ್ ಬೈಕ್ ಕದ್ದಿದ್ದಾನೆಂದು ಆರೋಪಿಸಿದ ಆರೋಪಿ ಖುರ್ಷೀದ್ ಮತ್ತು ಆತನ ಸಂಗಡಿಗರು ಮನೆಗೆ ಕರೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದೆ. ಬಳಿಕ ಜಹೀದ್ ನನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದೆ.>   ಹಲ್ಲೆಯ ತೀವ್ರತೆಯಿಂದ ಜಹೀದ್ ಸಾವನ್ನಪ್ಪಿದ್ದು, ಆತನ ಮೈಮೇಲೆಲ್ಲಾ ಹಲ್ಲೆ ಗುರುತಿತ್ತು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :